ಹೊಳಲ್ಕೆರೆ: ಕ್ರೀಡೆಯಿಂದ ವಿಶ್ವಮಟ್ಟದಲ್ಲಿ ಹೆಸರು, ಕೀರ್ತಿ, ಹಣ ಸಿಗುತ್ತದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಪಟ್ಟಣದ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಪ್ರಪಂಚಕ್ಕೇ ಹೆಸರಾಗಬಹುದು. ಕ್ರಿಕೆಟ್, ಫುಟ್‌ಬಾಲ್ ಕ್ರೀಡಾಪಟುಗಳು ಹಣ, ಕೀರ್ತಿಯೊಂದಿಗೆ ಜನಪ್ರಿಯತೆ ಪಡೆಯುತ್ತಾರೆ. ಒಲಿಂಪಿಕ್ಸ್‌ನಂತಹ ಕ್ರೀಡೆಗಳಲ್ಲಿ ಭಾಗವಹಿಸಿದರೆ ಹೆಚ್ಚು ಗೌರವ ಸಿಗುತ್ತದೆ. ಆದ್ದರಿಂದ ಪಠ್ಯಕ್ಕೆ ಕೊಡುವಷ್ಟೇ ಮನ್ನಣೆಯನ್ನು ಕ್ರೀಡೆಗೂ ಕೊಡಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಆರ್.ಎ.ಅಶೋಕ್, ಡಿ.ಸಿ.ಮೋಹನ್, ಮಾರುತೇಶ್, ರಾಜೇಶ್, ಸುರೇಂದ್ರನಾಥ್, ಟಿಪಿಒ ಷೇರ್ ಅಲಿ, ನಿಜಲಿಂಗಪ್ಪ, ಶ್ರೀಧರ್, ಜಯಪ್ಪ, ಚಂದ್ರಶೇಖರ್, ತಾಲ್ಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಕ್ರೀಡಾ ಸಂಚಾಲಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.