ADVERTISEMENT

ಕಥೆಗಾರ ಗುರುನಾಥ್ ನಿಧನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 17:05 IST
Last Updated 3 ಅಕ್ಟೋಬರ್ 2020, 17:05 IST
ಎಸ್‌.ಆರ್. ಗುರುನಾಥ್
ಎಸ್‌.ಆರ್. ಗುರುನಾಥ್   

ಚಿತ್ರದುರ್ಗ: ಕಥೆ, ಕಾದಂಬರಿ, ಕವನ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಇಲ್ಲಿನ ಬರಹಗಾರ ಎಸ್‌.ಆರ್. ಗುರುನಾಥ್ (75) ಶನಿವಾರ ಅನಾರೋಗ್ಯದಿಂದ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ನಗರದಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು.

ಬರವಣಿಗೆಯ ಮೂಲಕವೇ ಹಿಂದುಳಿದ ಸಮುದಾಯಗಳ ದನಿಯಾಗಿ ಜಿಲ್ಲೆಯಷ್ಟೇ ಅಲ್ಲದೆ, ರಾಜ್ಯಮಟ್ಟದಲ್ಲೂ ಛಾಪು ಮೂಡಿಸಿದ್ದರು. ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಅವರಿಗೆ ವಿವಿಧ ಫೆಲೋಷಿಪ್, ಪ್ರಶಸ್ತಿಗಳು ಸಂದಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.