ADVERTISEMENT

ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಸುಳ್ಳು ಸುದ್ದಿ ಪ್ರಚಾರ ಮಾಡುವವರ ವಿರುದ್ಧ ಕ್ರಮಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2019, 12:01 IST
Last Updated 24 ಜನವರಿ 2019, 12:01 IST
ಪೂರ್ಣಿಮಾ ಶ್ರೀನಿವಾಸ್.
ಪೂರ್ಣಿಮಾ ಶ್ರೀನಿವಾಸ್.   

ಹಿರಿಯೂರು: ‘ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳಲ್ಲಿ ನನ್ನನ್ನು ಆ ರೀತಿ ಬಿಂಬಿಸುತ್ತಿರುವುದು ನೋವು ತಂದಿದೆ. ಎಷ್ಟು ಸಲ ಹೇಳಿದರೂ ಪದೇ ಪದೇ ನನ್ನನ್ನು ಬಿಜೆಪಿ ಬಿಡುವವರ ಪಟ್ಟಿಯಲ್ಲಿ ತೋರಿಸಲಾಗುತ್ತಿದೆ. ಇದು ಮುಂದುವರಿದಲ್ಲಿ ಕಾನೂನು ಕ್ರಮಕ್ಕೆ ಚಿಂತನೆ ಮಾಡಬೇಕಾಗುತ್ತದೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಎಚ್ಚರಿಸಿದರು.

ನಗರದಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅಭಿವೃದ್ಧಿ ಕಾರ್ಯ ಮಾಡುವ ನಿಟ್ಟಿನಲ್ಲಿ ಬೇಕಿರುವ ಅನುದಾನಕ್ಕಾಗಿ ಆಡಳಿತ ನಡೆಸುತ್ತಿರುವ ಪಕ್ಷದ ಸಚಿವರ ಹತ್ತಿರ ಹೋದರೆ ಅದು ಪಕ್ಷ ಬಿಟ್ಟಂತೆ ಆಗುತ್ತದೆಯೇ? ಚುನಾವಣೆಗೆ ನಿಂತು ಗೆಲುವು ಸಾಧಿಸುವುದು ಎಷ್ಟುಕಷ್ಟ ಎಂಬ ಬಗ್ಗೆ ವದಂತಿ ಹಬ್ಬಿಸುವವರಿಗೆ ತಿಳಿದಿದೆಯೇ? ನಮ್ಮನ್ನು ನೆಮ್ಮದಿಯಾಗಿ ಕೆಲಸ ಮಾಡಿಕೊಂಡು ಹೋಗಲು ಬಿಡಬೇಕು. ಮಾಧ್ಯಮಗಳು ಗೌರವ ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

‘ನಗರಕ್ಕೆ ಮಿನಿ ವಿಧಾನಸೌಧ ಕಟ್ಟಡ ಮಂಜೂರು ಮಾಡಿಸಬೇಕು. ಕೆಎಸ್‌ಆರ್‌ಟಿಸಿ ಡಿಪೊ ತರಬೇಕಿದೆ. ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ಅವರಿಗೆ ನೀರು, ವಲಸೆ ತಡೆಗೆ ಸ್ಥಳೀಯವಾಗಿ ಉದ್ಯೋಗ ಕೊಡಿಸಬೇಕಿದೆ. ಒಣಗುತ್ತಿರುವ ತೆಂಗು, ಅಡಿಕೆ ತೋಟದ ರೈತರಿಗೆ ಯಾವುದಾದರೂ ರೂಪದಲ್ಲಿ ನೆರವು ಕೊಡಿಸಬೇಕಿದೆ. ಒಂದೆರಡು ತಿಂಗಳಲ್ಲಿ ಜಾನುವಾರು ರಕ್ಷಣೆಗೆ ಗೋಶಾಲೆ ಆರಂಭಿಸಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.