ADVERTISEMENT

UPSC ಫಲಿತಾಂಶ: ಹೊಸದುರ್ಗದ ವಿನಯ್‌ಕುಮಾರ್‌ಗೆ ಆರನೇ ಪ್ರಯತ್ನದಲ್ಲಿ ಯಶಸ್ಸು

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:38 IST
Last Updated 30 ಮೇ 2022, 15:38 IST
   

ಚಿತ್ರದುರ್ಗ: ಹೊಸದುರ್ಗದ ಎಂಜಿನಿಯರಿಂಗ್‌ ಪದವೀಧರ ಡಿ.ಎಚ್‌.ವಿನಯ್‌ಕುಮಾರ್‌ ಸತತ ಆರನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 352ನೇ ರ‍್ಯಾಂಕ್‌ ಪಡೆದು ಕನಸು ಕೈಗೂಡಿಸಿಕೊಂಡಿದ್ದಾರೆ.

ಉಪನ್ಯಾಸಕ ಡಿ.ಎಚ್‌.ಹೊರಕೇರಪ್ಪ ಹಾಗೂ ಶಿಕ್ಷಕಿ ಎನ್‌.ರೇಖಾ ದಂಪತಿಯ ಪುತ್ರ ವಿನಯ್‌ಕುಮಾರ್‌ ಯುಪಿಎಸ್‌ಸಿ ಪರೀಕ್ಷೆಯ ಕನಸು ಕಂಡಿದ್ದು ಚಿಕ್ಕಂದಿನಲ್ಲಿ. 1ರಿಂದ 5ನೇ ತರಗತಿವರೆಗಿನ ವ್ಯಾಸಂಗವನ್ನು ಹೊಸದುರ್ಗದ ಜ್ಞಾನವಾಹಿನಿ ಶಾಲೆಯಲ್ಲಿ ಮುಗಿಸಿದ್ದಾರೆ. 6ರಿಂದ ಪಿಯುಸಿವರೆಗಿನ ವ್ಯಾಸಂಗವನ್ನು ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಪಡೆದಿದ್ದರು. ಸುರತ್‌ಕಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮಗ ಉತ್ತೀರ್ಣರಾನಾಗಬೇಕು ಎಂದು ಪೋಷಕರು ಕನಸು ಕಂಡಿದ್ದರು. ಹೀಗಾಗಿ, 2015ರಿಂದ ವಿನಯ್‌ಕುಮಾರ್‌ ಸತತವಾಗಿ ಪ್ರಯತ್ನ ನಡೆಸಿದರು. 6ನೇ ಪ್ರಯತ್ನದಲ್ಲಿ ಕೊನೆಗೂ ಯಶಸ್ಸು ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.