ಚಳ್ಳಕೆರೆ: ವಿಜಯದಶಮಿ ಹಬ್ಬದ ಅಂಗವಾಗಿ ಇಲ್ಲಿನ ಹಳೆ ಟೌನ್‌ನ ಆರಾಧ್ಯ ದೇವತೆ ಚೌಡಮ್ಮ, ಮಾರಮ್ಮ ಮತ್ತು ವೆಂಕಟೇಶ್ವರ ಸ್ವಾಮಿ ಉತ್ಸವಮೂರ್ತಿ ಮೆರವಣಿಗೆ ಶುಕ್ರವಾರ ಸಂಭ್ರಮದಿಂದ ನಡೆಯಿತು.
ನಗರದ ಬಿ.ಎಂ. ಸರ್ಕಾರಿ ಪ್ರೌಢಶಾಲೆ ಆವರಣದ ಬನ್ನಿ ಮರದ ಕಟ್ಟೆ ಬಳಿ ಬಾಳೆಕಂದು ನೆಟ್ಟು ವಿಶೇಷ ಪೂಜೆ ಸಲ್ಲಿಸಿ ಅದನ್ನು ಕಡಿಯುವ ಮೂಲಕ ಅಂಬು ಹೊಡೆಯಲಾಯಿತು. ನಂತರ ಭಕ್ತರು ದೇವರುಗಳ ಅಲಂಕಾರಿಕ ಉತ್ಸವ ಮೂರ್ತಿಗಳನ್ನು ಹೊತ್ತು ಡೊಳ್ಳು, ಡ್ರಮ್‍ಸೆಟ್ ಹಾಗೂ ಉರುಮೆ ವಾದ್ಯದೊಂದಿಗೆ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು.
ದೇವರಿಗೆ ಮಹಾ ಮಂಗಳಾರತಿ, ತೀರ್ಥ ಮತ್ತು ಪ್ರಸಾದ ವಿನಿಯೋಗ ನಡೆಯಿತು.
ಪುರಸಭೆ ಮಾಜಿ ಅಧ್ಯಕ್ಷ ಜಿ.ಮಾರಣ್ಣ, ದೇವಸ್ಥಾನ ಸಮಿತಿ ಸದಸ್ಯ ಜಯಣ್ಣ, ನಗರಸಭೆ ನಾಮ ನಿರ್ದೇಶಕ ಸದಸ್ಯ ವೀರಭದ್ರಿ, ಎಸ್. ವೆಂಕಟೇಶ, ಏಕಾಂತಮ್ಮ, ಅನ್ನಪೂರ್ಣಮ್ಮ, ಪದ್ಮಾವತಿ, ಮಾರಕ್ಕ, ಚಳ್ಳಕೇರಪ್ಪ, ತಿಮ್ಮಣ್ಣ, ಸರೋಜಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.