ADVERTISEMENT

ಹಿರಿಯೂರಿನಲ್ಲಿ ಬಗೆ ಹರಿಯದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 8:05 IST
Last Updated 6 ಆಗಸ್ಟ್ 2025, 8:05 IST
ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಾಲಿನಲ್ಲಿ ಕೊಡಗಳನ್ನಿಟ್ಟು ಕಾಯುತ್ತಿರುವ ಮಹಿಳೆಯರು
ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಸಾಲಿನಲ್ಲಿ ಕೊಡಗಳನ್ನಿಟ್ಟು ಕಾಯುತ್ತಿರುವ ಮಹಿಳೆಯರು   

ಹಿರಿಯೂರು: ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ತಾಲ್ಲೂಕಿನ ಉಡುವಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿಂಡಸಕಟ್ಟೆ ಗ್ರಾಮದ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 

500 ಜನಸಂಖ್ಯೆ ಇರುವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 3 ಕೊಳವೆ ಬಾವಿ ಕೊರೆಸಲಾಗಿದೆ. ಆದರೆ, ಕೊಳವೆ ಬಾವಿಗಳಲ್ಲಿ  ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದೆ. ಈ ನೀರು ಗ್ರಾಮಸ್ಥರಿಗೆ ಸಾಲುತ್ತಿಲ್ಲ. ಗ್ರಾಮದ ಮಹಿಳೆಯರು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್. ಲೋಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ. 

ಉಡುವಳ್ಳಿ ಕೆರೆಯಲ್ಲಿ ನೀರಿದ್ದರೆ ನಮ್ಮ ಭಾಗದಲ್ಲಿ ಅಂತರ್ಜಲ ವೃದ್ಧಿಸುತ್ತದೆ. ಯಾವುದಾದರೂ ಮೂಲದಿಂದ ಉಡುವಳ್ಳಿ ಕೆರೆಗೆ ನೀರು ಹರಿಸಿ ಎಂದು 25–30 ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳ ಕಣ್ಣು ತೆರೆದಿಲ್ಲ ಎಂದು ಅವರು ಆರೋಪಿಸಿದರು.  

ADVERTISEMENT

ಶ್ರಾವಣ ಮಾಸ ಆರಂಭವಾಗಿದೆ. ಹಬ್ಬ, ಮದುವೆ ಇತ್ಯಾದಿ ಸಮಾರಂಭ ನಡೆಯುವ ದಿನಗಳಲ್ಲಿ ಬಳಸಲು ನೀರೇ ಇಲ್ಲದಿದ್ದರೆ ಜನ ಏನು ಮಾಡಬೇಕು ಎಂದು ಗ್ರಾಮದ ಲೋಕೇಶ್ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.