ADVERTISEMENT

‘ಆ್ಯಪ್’ ಮೂಲಕ ನೇಕಾರರ ಜಾತಿಗಣತಿಗೆ ಕ್ರಮ: ಶಿವಪ್ಪ ಶೆಟ್ರು

ಜಾತಿಗಣತಿಯಲ್ಲಿ ನೇಕಾರರಿಗೆ ಅನ್ಯಾಯ ಆರೋಪ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:07 IST
Last Updated 10 ಜೂನ್ 2025, 14:07 IST
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸಾಲೇಶ್ವರ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯನ್ನು ಶಿವಪ್ಪ ಶೆಟ್ರು ಉದ್ಘಾಟಿಸಿದರು
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸಾಲೇಶ್ವರ ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯನ್ನು ಶಿವಪ್ಪ ಶೆಟ್ರು ಉದ್ಘಾಟಿಸಿದರು   

ಮೊಳಕಾಲ್ಮುರು: ರಾಜ್ಯದಲ್ಲಿ ನೇಕಾರ ಸಮುದಾಯದ ಅಂದಾಜು 50 ಲಕ್ಷದಷ್ಟು ಜನರಿದ್ದು, ಸೋರಿಕೆಯಾಗಿರುವ ಜಾತಿಗಣತಿ ವರದಿಯಲ್ಲಿ ಕೇವಲ 9.20 ಲಕ್ಷ ಎಂದು ತೋರಿಸಲಾಗಿದೆ ಎಂಬ ಮಾಹಿತಿಯಿದೆ. ಇದು ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಎಂದು ಪಟ್ಟಸಾಲೆ ಸಮುದಾಯದ ರಾಜ್ಯ ಘಟಕದ ಗೌರವಾಧ್ಯಕ್ಷ ಶಿವಪ್ಪ ಶೆಟ್ರು ಹೇಳಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸಾಲೇಶ್ವರ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಜನಸಂಖ್ಯೆಯೇ ಮಾನದಂಡವಾಗಲಿದೆ. ನೇಕಾರ ಸಮುದಾಯಗಳ ಒಕ್ಕೂಟದಿಂದ ಪ್ರತ್ಯೇಕ ‘ಆ್ಯಪ್’ ಸಿದ್ಧಪಡಿಸಿದ್ದು ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಪತ್ರವನ್ನು ಪ್ರತಿ ಮನೆಗೂ ತಲುಪಿಸಲಾಗುವುದು ಎಂದರು.

ADVERTISEMENT

ಪಟ್ಟಸಾಲೆ ಗುರುಪೀಠದ ಬಸವರಾಜ ಪಟ್ಟಾಧಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಎಚ್.‌ ತಿಪ್ಪೇಸ್ವಾಮಿ, ಮಾಜಿ ಗೌರವಾಧ್ಯಕ್ಷ ಡಿ. ಷಡಾಕ್ಷರಪ್ಪ, ಸ್ಥಳೀಯ ಘಟಕದ ಅಧ್ಯಕ್ಷ ಎನ್.‌ ಅಪ್ಪಳ್ಳಿ, ನೇಕಾರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.