ADVERTISEMENT

ಅಮೆರಿಕದಲ್ಲಿ 5ನೇ ಕನ್ನಡ ಸಮ್ಮೇಳನ

ಆರ್‌ಟಿಇ ಪರ ಹೋರಾಟ ಸಂಘದಿಂದ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:05 IST
Last Updated 22 ಆಗಸ್ಟ್ 2019, 20:05 IST

ಬೆಂಗಳೂರು: ‘ನಾವಿಕ(ಉತ್ತರ ಅಮೆರಿಕ ವಿಶ್ವ ಕನ್ನಡಿಗರ ಆಗರ) ಸಂಸ್ಥೆಯಿಂದ ಅಮೆರಿಕದಲ್ಲಿ ಆ.30 ರಿಂದಸೆಪ್ಟಂಬರ್‌ 1ರವರೆಗೆ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಕಿರುತೆರೆ ನಟಿ ಯಮುನಾ ಶ್ರೀನಿಧಿತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಮ್ಮೇಳನದಲ್ಲಿ ಗಾಯಕರಾದ ವಿಜಯಪ್ರಕಾಶ್‌, ರಾಜೇಶ್‌ ಕೃಷ್ಣನ್‌, ಹೇಮಂತ್‌, ಅನುರಾಧ ಭಟ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕವಿಗೋಷ್ಠಿಯಲ್ಲಿ ಪ್ರೊ.ಕೆ.ಎಸ್‌ ನಿಸಾರ್ ಅಹಮ್ಮದ್‌, ಸಿದ್ಧಲಿಂಗಯ್ಯ, ಮೈಸೂರು ನಟರಾಜ್‌ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಒಟ್ಟು ಮೂರು ದಿನ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಪಿಟೀಲು ವಾದಕ ಅನೀಶ್‌ ವಿದ್ಯಾಶಂಕರ್‌ ಭಾಗವಹಿಸಲಿದ್ದಾರೆ. ಹರಟೆ ಕಾರ್ಯಕ್ರಮ, ವೈದ್ಯಕೀಯ, ವ್ಯಾಪಾರ, ಆಧ್ಯಾತ್ಮಿಕ ಮತ್ತು ಮಹಿಳಾ ವಿಚಾರ ಗೋಷ್ಠಿಗಳು ಮತ್ತು ಯೋಗ ತರಬೇತಿಗಳು ನಡೆಯಲಿವೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.