ADVERTISEMENT

ಉದ್ಯಮ ಸಂಪರ್ಕ ವಿದ್ಯಾರ್ಥಿಗಳಿಗೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 8:15 IST
Last Updated 3 ಮಾರ್ಚ್ 2012, 8:15 IST

ಮಂಗಳೂರು: ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನ ಗಳಿಕೆಗೆ ಕಾಲೇಜು- ಉದ್ಯಮ ಸಂಪರ್ಕ ಉತ್ತಮವಾಗಿರಬೇಕಿರುವುದು ಅತ್ಯಗತ್ಯ ಎಂದು ಉದ್ಯಮಿ ಕೇಶವ ಜಿ. ಪ್ರಭು ಹೇಳಿದರು.

ಸೇಂಟ್ ಅಲೊಷಿಯಸ್ ಕಾಲೇಜಿನ ಅನಾಲಿಟಿಕಲ್ ಕೆಮಿಸ್ಟ್ರಿ ವಿಭಾಗ ವತಿಯಿಂದ ಶುಕ್ರವಾರ ಎರಿಕ್ ಮಥಾಯಸ್ ಸಭಾಂಗಣ ದಲ್ಲಿ ಏರ್ಪಡಿಸಿದ್ದ `ಅನಾಲಿಸ್ಟ್~- ಅನಾಲಿ ಟಿಕಲ್ ಕೆಮಿಸ್ಟ್ರಿ ರಾಷ್ಟ್ರೀಯ ಮಟ್ಟದ ಅಂತರ ಕಾಲೇಜು ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿಯುವು ದಕ್ಕೂ ಹೆಚ್ಚಾಗಿ ಪ್ರಾಯೋಗಿಕವಾಗಿ ಉದ್ಯಮ ಅಧ್ಯಯನದಲ್ಲಿ ಕಲಿಯುವುದು ಹೆಚ್ಚು. ಹಾಗಾಗಿ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಪ್ರಾಯೋಗಿಕ ತರಬೇತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡು ಉದ್ಯಮ ಭೇಟಿ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಬೇಕು.
 
ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಹೆಚ್ಚುವರಿ ಪ್ರಾಯೋಗಿಕ ಜ್ಞಾನ ಪ್ರಾಪ್ತಿಯಾಗುವುದು ಎಂದು ಹೇಳಿ ದರು.ಈ ನಿಟ್ಟಿನಲ್ಲಿ `ಅನಾಲಿಸ್ಟ್~ ಉತ್ತಮ ಪ್ರಯತ್ನವಾಗಿದ್ದು, ಈ ರೀತಿಯ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವುದು ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಫಾ. ಸ್ವೀಬರ್ಟ್ ಡಿಸಿಲ್ವ ಮಾತನಾಡಿ, ಪ್ರತಿ ಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವ ಅಭಿವೃದ್ಧಿಯ ಅಗತ್ಯ ಇದ್ದೇ ಇರುತ್ತದೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಸಂದರ್ಭ ದಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ 12 ಸ್ನಾತಕೋತ್ತರ ಕೇಂದ್ರ ಹಾಗೂ 8 ಪದವಿ ಕಾಲೇಜುಗಳು ಭಾಗವಹಿಸಿದ್ದವು. ಕಾರ್ಯ ಕ್ರಮ ಸಂಚಾಲಕರಾದ ದೀಪ ವಸಂತ್, ವಿಭಾಗದ ಅಧ್ಯಕ್ಷ ರಿಚರ್ಡ್ ಗೊನ್ಸಾಲ್ವಸ್ ಮಧ್ಯಾಹ್ನ ನಡೆದ ಸಮಾರೋಪದಲ್ಲಿ ಸೀಕ್ವೆಂಟ್ ಸೈಂಟಿಫಿಕ್ ಸಂಸ್ಥೆ ಉಪ ಪ್ರಧಾನ ವ್ಯವಸ್ಥಾಪಕ ಪಿ.ಕೆ. ವಾಸುದೇವ ಮಾತ ನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.