ADVERTISEMENT

ಕದ್ರಿ ಸ್ಮಶಾನ ಭೂಮಿ ಉದ್ಘಾಟನೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 11:44 IST
Last Updated 21 ಮಾರ್ಚ್ 2018, 11:44 IST
ಕದ್ರಿ ಸ್ಮಶಾನ ಭೂಮಿ ಉದ್ಘಾಟನೆಗೆ ಅಡ್ಡಿ
ಕದ್ರಿ ಸ್ಮಶಾನ ಭೂಮಿ ಉದ್ಘಾಟನೆಗೆ ಅಡ್ಡಿ   

ಮಂಗಳೂರು: ಕದ್ರಿಯಲ್ಲಿರುವ ಹಿಂದೂ ಸ್ಮಶಾನದ ಉದ್ಘಾಟನೆಗೆ ಬಂದಿದ್ದ ಜನಪ್ರತಿನಿಧಿಗಳಿಗೆ ಸ್ಥಳೀಯರು ಅಡ್ಡಿಪಡಿಸಿದರು. ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಉದ್ಘಾ ಟನೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಮಶಾನದ ಸುತ್ತ ಇಂಟರ್‌ಲಾಕ್‌ ಅಳವಡಿಸಿರುವುದಕ್ಕೆ ಸ್ಥಳೀಯ ಜೋಗಿ ಸಮಾಜದವರು ಆಕ್ಷೇಪ ವ್ಯಕ್ತಪಡಿಸಿದರು. ಇಂಟರ್‌ಲಾಕ್‌ ಅನ್ನು ತೆರವುಗೊಳಿಸಬೇಕು. ಜೋಗಿ ಸಮಾಜದ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ಶಾಸಕ ಜೆ.ಆರ್‌. ಲೋಬೊ, ಮೇಯರ್ ಭಾಸ್ಕರ್‌ ಮೊಯಿಲಿ, ಸ್ಥಳೀಯರ ಬೇಡಿಕೆಗಳನ್ನು ಆಲಿಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಲೋಬೊ ಭರವಸೆ ನೀಡಿದರು.

ADVERTISEMENT

ನಂತರ ನಡೆದ ಕಾರ್ಯಕ್ರಮದಲ್ಲಿ ಸಚಿವ ಬಿ. ರಮಾನಾಥ ರೈ, ಅಭಿವೃದ್ಧಿಪಡಿಸಿದ ಸ್ಮಶಾನವನ್ನು ಉದ್ಘಾಟಿಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್‌ ಡಿಸೋಜ, ಮಾಜಿ ಮೇಯರ್‌ಗಳಾದ ಹರಿನಾಥ, ಮಹಾಬಲ ಮಾರ್ಲ, ಪಾಲಿಕೆ ಸದಸ್ಯ ಡಿ.ಕೆ. ಅಶೋಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.