ADVERTISEMENT

ಚೀನಿಕಾಯಿಯಲ್ಲಿ ಅಡಗಿಸಿದ್ದ ಗಾಂಜಾ ವಶ

​ಪ್ರಜಾವಾಣಿ ವಾರ್ತೆ
Published 20 ಮೇ 2018, 11:50 IST
Last Updated 20 ಮೇ 2018, 11:50 IST
ಚೀನಿಕಾಯಿಯಲ್ಲಿ ಗಾಂಜಾ ಅಡಗಿಸಿ ಇಟ್ಟಿರುವುದು.
ಚೀನಿಕಾಯಿಯಲ್ಲಿ ಗಾಂಜಾ ಅಡಗಿಸಿ ಇಟ್ಟಿರುವುದು.   

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಚೀನಿಕಾಯಿಯೊಳಗೆ ಅಪಾರ ಪ್ರಮಾಣ ಗಾಂಜಾ ಅಡಗಿಸಿ ವಿದೇಶಕ್ಕೆ ಅಕ್ರಮವಾಗಿ ಸಾಗಿಸುತ್ತಿರುವುದು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಕಲಾಯಿ ನಿವಾಸಿ ತಸ್ಲೀಂ ಬಂಧಿತ ವ್ಯಕ್ತಿ. ಈತನಿಂದ 10 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ ₹1.50 ಲಕ್ಷ ಎಂದು ಅಂದಾಜಿಸಲಾಗಿದೆ.

ತಸ್ಲೀಂ ಮಂಗಳೂರಿನಿಂದ ದೋಹಾಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ, ತಸ್ಲಿಂನ ಲಗೇಜ್ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಲಗೇಜ್ 4 ಚೀನಿಕಾಯಿಗಳು ಪತ್ತೆಯಾಗಿವೆ. ಚೀನಿಕಾಯಿಗಳನ್ನು ಟೊಳ್ಳಾ
ಗಿಸಿ ಅದರಲ್ಲಿ ಗಾಂಜಾ ತುಂಬಿರುವುದು ಕಂಡು ಬಂದಿದೆ.

ADVERTISEMENT

ತಸ್ಲೀಂನನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ದೋಹಾದಲ್ಲಿರುವ ಕೆಲವು ಗ್ರಾಹಕರಿಗಾಗಿ ಗಾಂಜಾ ಕೊಂಡೊಯ್ಯುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಇದೀಗ ತಸ್ಲೀಂನನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.