
ಪ್ರಜಾವಾಣಿ ವಾರ್ತೆಬದಿಯಡ್ಕ: ಮುಳ್ಳೇರಿಯ, ಅಡೂರು, ಕುಂಟಾರು ಪರಿಸರದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ತುಂತುರು ಮಳೆ ಆರಂಭವಾಗಿದ್ದು, ದಿಢೀರ್ ಮಳೆಯಿಂದ ಕೃಷಿಕರು ಅಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿದೆ. ಈಗ ಸುರಿದಿರುವ ಮಳೆಯಿಂದ ಹೊಸದಾಗಿ ಚಿಗುರಿದ ಅಡಿಕೆ ಹಿಂಗಾರಕ್ಕೆ ತೊಂದರೆ ಆಗಬಹುದು ಎಂಬುದು ಕೃಷಿಕರ ಅಭಿಮತ. ಕಾಳುಮೆಣಸು ಕಟಾವಿಗೆ ಸಿದ್ಧವಾಗಿದ್ದು, ಅಕಾಲಿಕ ಮಳೆಯ ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ. ಈ ವರ್ಷ ಅಡಿಕೆ ಇಳುವರಿ ಬಹಳ ಕಡಿಮೆ ಇದ್ದು, ಕೊಯ್ಲು ಮಾಡಿರುವ ಅಡಿಕೆ ಮಳೆಯಿಂದ ಒದ್ದೆಯಾಗಿರುವುದು ಮತ್ತು ಮಳೆ ಮುಂದುವರಿದರೆ ಒಣಗಲು ಹಾಕಿರುವ ಅಡಿಕೆಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.