ADVERTISEMENT

ಭಕ್ತಕೋಡಿಯ ಜನರು ನೀರಿಲ್ಲದೆ ಕಂಗಾಲು

ದುರ್ವಾಸನೆ ಬೀರುತ್ತಿರುವ ಕೊಳವೆ ಬಾವಿ ನೀರು

ಶಶಿಧರ ಕುತ್ಯಾಳ
Published 30 ನವೆಂಬರ್ 2016, 7:48 IST
Last Updated 30 ನವೆಂಬರ್ 2016, 7:48 IST
ಪುತ್ತೂರು: ಪುತ್ತೂರು ತಾಲ್ಲೂಕಿನ ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತಕೋಡಿ ಎಂಬಲ್ಲಿರುವ  ಕೊಳವೆಬಾವಿಯಿಂದ ಪೂರೈಕೆಯಾ ಗುತ್ತಿರುವ ಕುಡಿಯುವ ನೀರು ಕಳೆದ ಕೆಲ ದಿನಗಳಿಂದ ದುರ್ವಾಸನೆ ಬೀರುತ್ತಿದ್ದು, ಕುಡಿಯಲು ಮಾತ್ರವಲ್ಲದೆ ಬಟ್ಟೆಬರೆ ಪಾತ್ರೆಗಳನ್ನು ತೊಳೆಯಲು ಕೂಡ ಅಯೋಗ್ಯವಾಗಿದೆ. ಇದೊಂದು ವಿಚಿತ್ರ ಘಟನೆಯಾಗಿದ್ದು,  ಈ ಕೊಳವೆ ಬಾವಿಯ ನೀರನ್ನೇ ಆಶ್ರಯಿಸಿರುವ  ಭಕ್ತಕೋಡಿ, ಅಲೇಕಿ, ಸರ್ವ ಭಾಗದ ಸುಮಾರು 100ಕ್ಕೂ ಮಿಕ್ಕಿದ ಕುಟುಂ ಬಗಳು ಕಂಗಾಲಾಗಿವೆ. ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಇಲ್ಲಿನ ಜನರಿಗೆ ಎದುರಾಗಿದೆ. 
 
ಭಕ್ತಕೋಡಿಯಲ್ಲಿರುವ ಈ ಕೊಳೆವೆ ಬಾವಿಯಿಂದಲೇ ಈ ಪ್ರದೇಶದಲ್ಲಿರುವ ಹಲವಾರು ಮನೆಗಳಿಗೆ  ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಆದರೆ ಎರಡು ವಾರಗಳ ಹಿಂದೆ ಈ ಕೊಳೆ ಬಾವಿಯ ನೀರು ಏಕಾಏಕಿ ದುರ್ವಾಸನೆ ಬೀರಲು ಪ್ರಾರಂಭವಾಗಿತ್ತು. ಆರಂಭ ದಲ್ಲಿ ಈ ನೀರನ್ನು ಬಳಸುವ ಮಂದಿ ತಮ್ಮ ನೀರಿನ ಟ್ಯಾಂಕಿಗಳು ಶುಚಿತ್ವ ಇಲ್ಲದ ಕಾರಣ ನೀರು ದುರ್ವಾಸನೆ ಬೀರುತ್ತಿರಬಹುದೆಂದು ಶಂಕಿಸಿ ಶುಚಿ ತ್ವಕ್ಕೆ ಮುಂದಾಗಿದ್ದರು. ಆದರೆ ಕೊಳೆವೆ ಬಾವಿಯಿಂದ ಪೂರೈಕೆಯಾಗುವ ನೀರೇ ದುರ್ವಾಸನೆ ಬೀರುತ್ತಿದೆ ಎಂಬುವುದು ಬಳಿಕ ಸ್ಪಷ್ಟವಾಗಿತ್ತು.  ಈ ಹಿನ್ನಲೆಯಲ್ಲಿ ಸ್ಥಳೀಯರು ಪಂಚಾಯಿತಿಗೆ ಮಾಹಿತಿ ನೀಡಿ ಬದಲಿ ನೀರಿನ ವ್ಯವಸ್ಥೆ ಕಲ್ಪಿಸು ವಂತೆ ಆಗ್ರಹಿಸಿದ್ದರು. 
 
ಸ್ಥಳೀಯರ ದೂರಿನಂತೆ  ಮುಂ ಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ ವಸಂತ, ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ಸುಜಾತಾ ಅವರು  ಸ್ಥಳಕ್ಕೆ ಭೇಟಿ ನೀಡಿ ಕೊಳವೆ ಬಾವಿ ನೀರನ್ನು ಪರಿಶೀಲನೆ ನಡೆಸಿದ್ದು, ನೀರು ದುರ್ವಾ ಸನೆ ಬೀರುತ್ತಿರುವ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ ದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಶಿವರಂಜನ್ ಅವರು ಕೂಡ ಭೇಟಿ ನೀಡಿ ನೀರು ದುರ್ವಾಸನೆ ಬೀರುತ್ತಿರುವುದನ್ನು ಖಚಿತಪಡಿಸಿಕೊಂಡು ,ಮೇಲಧಿ ಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿ ದ್ದಾರೆ.  ಜಿಲ್ಲಾ ಪಂಚಾಯಿತಿ ಎಂಜಿನಿ ಯರ್ ಅವರು  ಸ್ಥಳಕ್ಕೆ ಭೇಟಿ ನೀಡಿ ದುರ್ವಾಸನೆ ಬೀರುತ್ತಿದ್ದ ನೀರನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲು ಕೊಂಡೊಯ್ದಿದ್ದಾರೆ. ಪರೀಕ್ಷಾ ವರದಿ ಬಂದ ಬಳಿಕವಷ್ಟೇ ನೀರು ದುರ್ವಾಸನೆ ಬೀರಲು ಕಾರಣವೇನೆಂಬುವುದು ಖಚಿತವಾಗಲಿದೆ.  ಕುಡಿಯುವ ನೀರಿ ಗಾಗಿ ಪಂಚಾಯಿ ತಿಗೆ ಅನುದಾನ ಬರು ತ್ತಿಲ್ಲ. ಶಾಸಕರೇ ಅನುದಾನ ವಿನಿಯೋ ಗಿಸಬೇಕು. ಕೋ ರಿಕೆ ಸಲ್ಲಿಸಿದರೂ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಅನುದಾನ ನೀಡಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ತಿಳಿಸಿದ್ದಾರೆ. 
 
**
ರೋಗ ಹರಡುವ ಭೀತಿ...!
ಈ ಕೊಳವೆ ಬಾವಿಯಿಂದ ಪೂರೈಕೆಯಾಗುತ್ತಿರುವ ನೀರು ದುರ್ವಾಸನೆ ಬೀರುತ್ತಿದ್ದರೂ ಪರ್ಯಾಯ ನೀರಿನ ವ್ಯವಸ್ಥೆ ಇಲ್ಲದ ಇಲ್ಲಿನ ಕುಟುಂಬಗಳು ಇದೇ ನೀರನ್ನು ಸ್ನಾನ, ಶೌಚಕ್ಕೆ ಬಳಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆರಂಭದಲ್ಲಿ ಮಾಹಿತಿ ಇಲ್ಲದೆ ಈ ನೀರನ್ನು ಕುಡಿದ ಕೆಲ ಮಂದಿಗೆ ವಾಂತಿ ಭೇಧಿಯೂ ಕಾಣಿಸಿಕೊಂಡಿತ್ತು. ಸಂಕ್ರಾಮಿಕ ರೋಗ ಹರಡಬಹುದೆಂಬ ಭೀತಿ ಇದೀಗ ಇಲ್ಲಿನ ಜನರನ್ನು ಆವರಿಸಿದೆ.   
 
**
ಭಕ್ತಕೋಡಿಯಲ್ಲಿ  ಕೊಳವೆ ಬಾವಿಯ ನೀರು ವಾಸನೆ ಬರುತ್ತಿದ್ದು, ಅದನ್ನು ಪರೀಕ್ಷಿಸಲಾಗುವುದು. ಪರೀಕ್ಷೆ ವರದಿ ಬಂದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. 
-ಮೀನಾಕ್ಷಿ ಶಾಂತಿಗೋಡು 
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.