ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಹುಮತದ ಬೆಂಬಲವಿದ್ದರೂ ಸ್ವಯಂಕೃತ ತಪ್ಪಿನಿಂದಾಗಿ ಬಿಜೆಪಿಗೆ ಮೇಯರ್ ಸ್ಥಾನ ಕೈತಪ್ಪಿದ್ದು, ವಿರೋಧಪಕ್ಷ ಕಾಂಗ್ರೆಸ್‌ಗೆ ಅಧಿಕಾರದ ಅದೃಷ್ಟ ಒಲಿದಿದೆ.
ಮೇಯರ್-ಉಪ ಮೇಯರ್, ಸ್ಥಾಯಿ ಸಮಿತಿಗೆ ಬುಧವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ನ ಗುಲ್ಜಾರ್ ಬಾನು ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ಮೇಯರ್ ಸ್ಥಾನ ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿತ್ದ್ತು. ಬಿಜೆಪಿಯ ರೂಪಾ ಡಿ.ಬಂಗೇರ ಸಮರ್ಪಕ ಜಾತಿ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಚುನಾವಣಾಧಿಕಾರಿಯಾಗಿದ್ದ ಮೈಸೂರಿನ ವಿಭಾಗೀಯ ಆಯುಕ್ತರಾದ ಎಂ.ವಿ.ಜಯಂತಿ ನಾಮಪತ್ರ ತಿರಸ್ಕರಿಸಿದರು. ಅದೃಷ್ಟ ಗುಲ್ಜಾರ್ ಬಾನುವಿಗೆ ಒಲಿಯಿತು.
ಉಪ ಮೇಯರ್: ಉಪ ಮೇಯರ್ ಸ್ಥಾನ ಹಿಂದುಳಿದ ಜಾತಿ ಮಹಿಳೆಗೆ ಮೀಸಲಾಗಿದ್ದು, ಕಾಂಗ್ರೆಸ್ ಸದಸ್ಯೆ ಅಪ್ಪಿ ಅವರನ್ನು 35-21 ಮತಗಳ ಅಂತರದಿಂದ ಸೋಲಿಸಿದ ಬಿಜೆಪಿಯ ಅಮಿತಕಲಾ ಉಪ ಮೇಯರ್ ಆದರು.
60 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 35, ಕಾಂಗ್ರೆಸ್ 21, ಸಿಪಿಎಂ, ಜೆಡಿಎಸ್ ತಲಾ ಒಬ್ಬರು ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.