ADVERTISEMENT

ಮಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ: ಸಾಧ್ವೀ ಮಾತಾನಂದಮಯೀ

ಉಚಿತ ಆಯುಷ್ ಚಿಕಿತ್ಸೆ ಶಿಬಿರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 14:29 IST
Last Updated 28 ಏಪ್ರಿಲ್ 2019, 14:29 IST
ವಿಟ್ಲದ ವಿಠಲ ಪಪೂ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸೆ ಶಿಬಿರವನ್ನು ಸಾಧ್ವೀ ಮಾತಾನಂದಮಯೀ ಉದ್ಘಾಟಿಸಿದರು.
ವಿಟ್ಲದ ವಿಠಲ ಪಪೂ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸೆ ಶಿಬಿರವನ್ನು ಸಾಧ್ವೀ ಮಾತಾನಂದಮಯೀ ಉದ್ಘಾಟಿಸಿದರು.   

ವಿಟ್ಲ: ಉತ್ತಮ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಉಂಟಾಗುತ್ತದೆ. ಸಾಂದರ್ಭಿಕ ಆಹಾರ ಸೇವನೆ ಅತೀ ಮುಖ್ಯ. ಬಾಯಿ ಚಪಲತೆ ನಿಯಂತ್ರಣದಲ್ಲಿಟ್ಟು ಹಿತವಾಗಿ, ಮಿತವಾಗಿ ಸಾತ್ವಿಕ ಆಹಾರ ಸೇವಿಸುವುದರಿಂದ ಆರೋಗ್ಯವನ್ನು ರಕ್ಷಿಸಲು ಸುಲಭ. ಶರೀರದ ಸೂಕ್ಷ್ಮರೂಪ ಮನಸ್ಸು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾಮ್‌ನ ಸಾಧ್ವೀ ಮಾತಾನಂದಮಯೀ ಹೇಳಿದರು.

ಅವರು ಭಾನುವಾರ ಒಡಿಯೂರು ಗುರುದೇವದತ್ತ ಸಂಸ್ಥಾಮ್ ಪ್ರಾಯೋಜಿತ ಒಡಿಯೂರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಒಡಿಯೂರು ಗ್ರಾಮವಿಕಾಸ ಯೋಜನೆ, ಒಡಿಯೂರು ವಿಕಾಸವಾಹಿನಿ ಸ್ವ-ಸಹಾಯ ಸಂಘಗಳ ವಿಟ್ಲ ಮತ್ತು ವಿಟ್ಲಪಡ್ನೂರು ಘಟ ಸಮಿತಿ, ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನ, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗ, ವಿಟ್ಲದ ವಿಠಲ ವಿದ್ಯಾ ಸಂಘ ಹಾಗೂ ದ.ಕ.ಜಿಲ್ಲಾ ಆಯುಷ್ ಇಲಾಖೆ, ಮಂಗಳೂರು, ಮೂಡಬಿದಿರೆ ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜು ಇದರ ತಜ್ಞ ವೈದ್ಯರಿಂದ ವಿಟ್ಲದ ವಿಠಲ ಪಪೂ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಅಭ್ಯಾಗತರಾಗಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ.ವಿಟ್ಲ, ಕೊಲ್ಲೂರು ಬಲಕುಂಜ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಶೋಭಾರಾಣಿ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿರ್ದೇಶಕ ಗಣೇಶ್ ರೈ ಗಮಿ, ವಿಟ್ಲ ಯಕ್ಷಭಾರತ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಡಿ.ಸಂಜೀವ ಪೂಜಾರಿ, ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಜಾನ್ ಡಿಸೋಜ, ಡಾ. ಕೃಷ್ಣಪ್ರಸಾದ್, ಒಡಿಯೂರು ಗ್ರಾಮವಿಕಾಸ ಯೋಜನೆ ವಿಸ್ತರಣಾಧಿಕಾರಿ ಸದಾಶಿವ ಅಳಿಕೆ, ಯಶವಂತ ವಿಟ್ಲ, ನಿಕಟಪೂರ್ವ ಅಧ್ಯಕ್ಷ ಸುನಿಲ್, ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಇದೇ ಸಂದರ್ಭ ವಿಟ್ಲ ಮತ್ತು ವಿಟ್ಲಪಡ್ನೂರು ಗ್ರಾಮಗಳ 22 ವಿಕಾಸವಾಹಿನಿ ಸ್ವಸಹಾಯ ಸಂಘಗಳ ಅರ್ಹ ಸದಸ್ಯರಿಗೆ ಒಟ್ಟು ಲಾಭಾಂಶ ₹ 4.72 ಲಕ್ಷ ವಿತರಿಸಲಾಯಿತು.

ಕೈರುನ್ನೀಸಾ ಸ್ವಾಗತಿಸಿ, ಹೇಮಾನಂದ ಶೆಟ್ಟಿ ವಂದಿಸಿದರು. ಸ್ವಾತಿ ನಿರೂಪಿಸಿ, ಕಾವ್ಯಾ, ಪದ್ಮನಾಭ ಸಹಕರಿಸಿದರು. ಕೃಪಾ ದೇವರಮನೆ ಆಶಯಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.