ADVERTISEMENT

ರಸ್ತೆ ದುರಸ್ತಿಗೆ ಆಗ್ರಹ: ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2013, 12:17 IST
Last Updated 23 ಜುಲೈ 2013, 12:17 IST
ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಕೊಡಪಾಡಿ-ಕಂಚುಗೋಡು ಮೀನುಗಾರಿಕಾ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ರಸ್ತೆತಡೆ ನಡೆಸಿದರು. 	(ಬೈಂದೂರು ಚಿತ್ರ)
ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ಕೊಡಪಾಡಿ-ಕಂಚುಗೋಡು ಮೀನುಗಾರಿಕಾ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ರಸ್ತೆತಡೆ ನಡೆಸಿದರು. (ಬೈಂದೂರು ಚಿತ್ರ)   

ಗುಜ್ಜಾಡಿ (ಬೈಂದೂರು): ಗುಜ್ಜಾಡಿ ಗ್ರಾ.ಪಂ. ವ್ಯಾಪ್ತಿಯ ಕೊಡಪಾಡಿ-ಕಂಚುಗೋಡು ರಸ್ತೆಯ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.

ಊರ ಪ್ರಮುಖರು, ರಿಕ್ಷಾ ಚಾಲಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೀನುಗಾರಿಕಾ ರಸ್ತೆಯನ್ನು ಕಳೆದ ಸಾಲಿನಲ್ಲಿ ತುರ್ತು ಕಾಮಗಾರಿಯ ಮೂಲಕ ದುರಸ್ತಿ ಮಾಡಲಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ಇಲ್ಲದೆ ಇರುವುದರಿಂದ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದೆ. ಇದರಿಂದಾಗಿ ರಸ್ತೆಯಲ್ಲಿ ದ್ಡೊ ಹೊಂಡಗಳೂ ನಿರ್ಮಾಣವಾಗಿವೆ. ಜನರಿಗೆ ಸಂಚರಿಸಲು ಅಸಾಧ್ಯವೆನ್ನುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಕೆಲವು ಶಾಲಾ ಮಕ್ಕಳು ಇದರಲ್ಲಿ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಯ ದುಸ್ಥಿತಿಯಿಂದಾಗಿ  ಶಾಲಾ ಮಕ್ಕಳಿಗೆ, ಮೀನುಗಾರರಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಅವರು ದೂರಿದರು.

ರಸ್ತೆ ತಡೆದು ಪ್ರತಿಭಟನೆ ನಡೆಸಿದ ಬಳಿಕ ಗ್ರಾ.ಪಂ. ಕಚೇರಿಗೆ ಮನವಿ ನೀಡಲು ಹೋದಾಗ ಅಲ್ಲಿ ಸದಸ್ಯರೇ ಇಲ್ಲದಿರುವುದನ್ನು ಗಮನಿಸಿ ಗ್ರಾಮಸ್ಥರು ಆಕ್ರೋಶಗೊಂಡರು. ಕಚೇರಿಗೆ ಬೀಗಹಾಕಲು ಮುಂದಾದರು. ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಪೊಲೀಸರ ಮಧ್ಯಸ್ಥಿಕೆಯ ಬಳಿಕ ಮನವಿಯನ್ನು ಕಾರ್ಯದರ್ಶಿಗೆ ನೀಡಿ ಪ್ರತಿಭಟನೆ ವಾಪಸ್ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.