ADVERTISEMENT

‘ಯಕ್ಷಗಾನ ಸಂಶೋಧನಾ ಕೇಂದ್ರವಾಗಲಿ ಬನಾರಿ’

ಕೀರಿಕ್ಕಾಡು ಮಾಸ್ತರ್ ಜನ್ಮ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 9:56 IST
Last Updated 1 ಜನವರಿ 2014, 9:56 IST

ಸುಳ್ಯ: ಬನಾರಿಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವು ಯಕ್ಷಗಾನ ಕಲೆಯ ಕ್ರಿಯಾಶೀಲ ಅಧ್ಯಯನ ಕೇಂದ್ರವಾಗಿ ಬೆಳಗಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು. ಭಾನುವಾರ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ 69ನೇ ವಾರ್ಷಿಕೋತ್ಸವ ಮತ್ತು ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಏಳು ದಶಕಗಳ ಇತಿಹಾಸವಿರುವ ಯಕ್ಷಗಾನ ಕೇಂದ್ರವು ಯಕ್ಷಗಾನದ ಅಭಿವೃದ್ಧಿಗೆ ಅನನ್ಯ ಕೊಡುಗೆಯನ್ನು ನೀಡಿದೆ. ಬನಾರಿಯು ಯಕ್ಷಗಾನ ಕಲೆಯ ಸಂಶೋಧನಾ ಕೇಂದ್ರವಾಗಬೇಕು ಮತ್ತು ಜನರಲ್ಲಿ ಅಧ್ಯಯನಶೀಲತೆ ಬೆಳೆಯಬೇಕು, ಆ ಮೂಲಕ ಯಕ್ಷಗಾನ ಕಲೆಯು ಅಭಿವೃದ್ಧಿ­ಯಾಗಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿ­ಯಾಗಿದ್ದ ಸಂದರ್ಭದಲ್ಲಿ ಸರ್ಕಾರದಿಂದ ಆರ್ಥಿಕ ನೆರವು ನೀಡಿದ್ದೇನೆ ಎಂದು ಅವರು ಹೇಳಿದರು.

ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಮಾಸ್ತರ್ ಸಭಾಭವನದಲ್ಲಿ ನಡೆದ ಸಮಾರಂಭವನ್ನು ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಸರಗೋಡು ಸಂಸದ ಪಿ.ಕರುಣಾಕರನ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಬಿ.ಸುಬ್ಬಯ್ಯ ರೈ, ಊಜಂಪಾಡಿ ನಾರಾಯಣ ನಾೈಕ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಖ್ಯಾತ ಯಕ್ಷಗಾನ ಮದ್ದಳೆಗಾರರು ಮತ್ತು ಹಿಮ್ಮೇಳ ಶಿಕ್ಷಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಕೀರಿಕ್ಕಾಡು ಜನ್ಮ ಶತಮಾನೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. ಸುಂದರ ಕೇನಾಜೆ ಅಭಿನಂದನಾ ಭಾಷಣ ಮಾಡಿದರು. ವಸಂತಕುಮಾರ್ ಪೆರ್ಲ ಕೀರಿಕ್ಕಾಡು ಸಂಸ್ಮರಣೆ ಮಾಡಿದರು. ರಮಾನಂದ ಬನಾರಿ ಪ್ರಾಸ್ತಾವಿಕ ಮಾತನಾಡಿದರು. ಕಲಾ ಸಂಘದ ಅಧ್ಯಕ್ಷ ವನಮಾಲ ಕೇಶವ ಭಟ್ಟ, ವಿಶ್ವವಿನೋದ ಬನಾರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT