ADVERTISEMENT

1,035 ಹಜ್ ಯಾತ್ರಿಕರಿಗೆ ಲಸಿಕೆ

ದ.ಕ: ಕೇಂದ್ರ ಹಜ್ ಸಮಿತಿ ಮೂಲಕ 1,097 ಮಂದಿ ಹಜ್ ಯಾತ್ರೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2025, 5:30 IST
Last Updated 25 ಏಪ್ರಿಲ್ 2025, 5:30 IST
ಹಜ್ ಯಾತ್ರಾರ್ಥಿಗಳು ಮಂಗಳೂರಿನ ಜಪ್ಪಿನಮೊಗರು ಯೆನೆಪೋಯ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಬಿರದಲ್ಲಿ ಲಸಿಕೆ ಹಾಕಿಸಿಕೊಂಡರು: ಪ್ರಜಾವಾಣಿ ಚಿತ್ರ
ಹಜ್ ಯಾತ್ರಾರ್ಥಿಗಳು ಮಂಗಳೂರಿನ ಜಪ್ಪಿನಮೊಗರು ಯೆನೆಪೋಯ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಶಿಬಿರದಲ್ಲಿ ಲಸಿಕೆ ಹಾಕಿಸಿಕೊಂಡರು: ಪ್ರಜಾವಾಣಿ ಚಿತ್ರ   

ಮಂಗಳೂರು: ಕೇಂದ್ರ ಹಜ್ ಕಮಿಟಿ ಮೂಲಕ ಈ ವರ್ಷ ಹಜ್ ಯಾತ್ರೆ ಕೈಗೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯ 1,035 ಹಜ್ ಯಾತ್ರಿಕರಿಗೆ ಜಪ್ಪಿನಮೊಗರುವಿನ ಯೆನೆಪೋಯ ಶಾಲೆಯಲ್ಲಿ ಗುರುವಾರ ಲಸಿಕೆ ಹಾಕಲಾಯಿತು. ಯಾತ್ರಿಕರು ಆರೋಗ್ಯ ಸದೃಢವಾಗಿರುವ ಕುರಿತು ವೈದ್ಯರ ಪ್ರಮಾಣಪತ್ರಗಳನ್ನು ಹಾಜರುಪಡಿಸಿ ಲಸಿಕೆ ಹಾಕಿಸಿಕೊಂಡರು.

ರಾಜ್ಯ ಹಜ್ ಕಮಿಟಿಯ ಸದಸ್ಯ ಶರಫುಸ್ಸಾದಾತ್ ಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ಅವರು  ಪ್ರಾರ್ಥನೆ ನೆರವೇರಿಸುವ ಮೂಲಕ ಲಸಿಕೆ ಶಿಬಿರವನ್ನು ಉದ್ಘಾಟಿಸಿದರು. 

‘ಈ ಬಾರಿ ಕೇಂದ್ರ ಹಜ್ ಸಮಿತಿಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಿಂದ 1,097 ಮಂದಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಹಜ್ ಯಾತ್ರೆಯ ವಿಮಾನಗಳು ಬೆಂಗಳೂರಿನಿಂದ ಹೊರಡಲಿದೆ’ ಎಂದು ಅವರು ತಿಳಿಸಿದರು. 

ADVERTISEMENT

ಜಿಲ್ಲಾ ಹಜ್ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಎಸ್.ಎಂ.ರಶೀದ್, ‘ಹಜ್ ಯಾತ್ರಿಕರ ಅನುಕೂಲಕ್ಕಾಗಿ ಬಜಪೆಯಲ್ಲಿ ಸುಸಜ್ಜಿತ ಹಜ್ ಭವನ ನಿರ್ಮಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ನಿವೇಶನವನ್ನು ದಾನ ಮಾಡಿದ್ದಾರೆ. ಇಲ್ಲಿ ಹಜ್ ಭವನ ನಿರ್ಮಾಣಕ್ಕೆ ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸುವ ನಿರೀಕ್ಷೆ ಇದೆ’ ಎಂದರು.

ಹಜ್ ನಿರ್ವಹಣಾ ಸಮಿತಿ ಉಪಾಧ್ಯಕ್ಷ ಮಹಮೂದ್, ಎ.ಕೆ.ಜಮಾಲ್, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷ ಫಕೀರಬ್ಬ ಮಾಸ್ಟರ್, ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್, ಜಿಲ್ಲಾ ಪ್ರಜನನ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ರಾಜೇಶ್ ಬಿ.ವಿ, ಯೆನೆಪೋಯ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುಹಮ್ಮದ್ ತಾಹೀರ್, ಯೆನೆಪೋಯ ಸಂಸ್ಥೆಗಳ ಸಮೂಹದ ನಿರ್ದೇಶಕ ಖುರ್ಷಿದ್ ಅಹ್ಮದ್, ದಕ್ಷಿಣ ಕನ್ನಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್, ಗೌರವ ಕಾರ್ಯದರ್ಶಿ ಅಹ್ಮದ್ ಬಾವ ಮೊಹಿದ್ದೀನ್‌, ಪ್ರಮುಖರಾದ ಮುಹಮ್ಮದ್ ಹನೀಫ್ ಗೋಳ್ತಮಜಲು, ಹನೀಫ್, ಇಬ್ರಾಹಿಂ ಕೊಣಾಜೆ, ರಿಯಾಜ್, ಫಝಲ್, ಸಿ.ಎಚ್.ಉಳ್ಳಾಲ, ಅಹ್ಮದ್ ಬಾವಾ ಮೊಯ್ದೀನ್, ಸೈಯ್ಯದ್ ಮೀರಾಜ್ ತಂಙಳ್, ಸುಲೈಮಾನ್ ಕರಾಯ ,ರಫಿಕ್, ಸಯ್ಯದ್ ನಾಸಿರ್, ಬಶೀರ್ ಜಪ್ಪು, ಶರೀಫ್ ಬಜಪೆ ಮೊದಲಾದವರು ಭಾಗವಹಿಸಿದ್ದರು.

Highlights - ಹಜ್ ಯಾತ್ರೆಗೆ ಹೊರಟಿರುವ 559 ಮಹಿಳೆಯರು ಲಸಿಕೆ ಹಾಕಿಸಿಕೊಂಡರು 476 ಪುರುಷ ಯಾತ್ರಿಕರು ಲಸಿಕೆ ಹಾಕಿಸಿಕೊಂಡರು ಹಜ್ ಯಾತ್ರೆ: ಮೊದಲ ವಿಮಾನ ಇದೇ 28ರಂದು ಬೆಂಗಳೂರಿನಿಂದ ಹೊರಡಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.