ADVERTISEMENT

ವೇಣೂರು: ಪೆರ್ಮುಡ ಕಂಬಳದಲ್ಲಿ 147 ಜತೆ ಕೋಣಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 15:30 IST
Last Updated 31 ಮಾರ್ಚ್ 2025, 15:30 IST
ವೇಣೂರು ಪೆರ್ಮುಡ 32ನೇ ವರ್ಷದ ಸೂರ್ಯ– ಚಂದ್ರ ಜೋಡುಕರೆ ಬಯಲು ಕಂಬಳದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿದ ದೃಶ್ಯ
ವೇಣೂರು ಪೆರ್ಮುಡ 32ನೇ ವರ್ಷದ ಸೂರ್ಯ– ಚಂದ್ರ ಜೋಡುಕರೆ ಬಯಲು ಕಂಬಳದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿದ ದೃಶ್ಯ   

ಬೆಳ್ತಂಗಡಿ: ಕಂಬಳದಲ್ಲಿ 147 ಜತೆ ಕೋಣಗಳು ಭಾಗವಹಿಸಿದ್ದವು.

ಕನೆ ಹಲಗೆ ವಿಭಾಗದಲ್ಲಿ 4 ಜತೆ ಕೋಣಗಳು ಭಾಗವಹಿಸಿದ್ದು, ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ), ನಿಡ್ಡೋಡಿ ಕಾನ ರಾಮ ಸುವರ್ಣ ಅವರ ಕೋಣಗಳು (ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) 6.5 ಕೋಲು ನಿಶಾನೆಗೆ ನೀರು ಹಾಯಿಸುವ ಮೂಲಕ ಬಹುಮಾನ ಗೆದ್ದುಕೊಂಡವು.

ಅಡ್ಡಹಲಗೆ ವಿಭಾಗದಲ್ಲಿ ಭಾಗವಹಿಸಿದ 4 ಜತೆ ಕೋಣಗಳಲ್ಲಿ ನಾರಾವಿ ಯುವರಾಜ್ ಜೈನ್ ಅವರ (ಹಲಗೆ ಮುಟ್ಟಿದವರು: ಭಟ್ಕಳ ಹರೀಶ್) ಕೋಣಗಳು ಪ್ರಥಮ, ಬೋಳಾರ ತ್ರಿಶಾಲ್ ಕೆ.ಪೂಜಾರಿ ಅವರ (ಹಲಗೆ ಮುಟ್ಟಿದವರು: ಮಂದಾರ್ತಿ ಭರತ್ ನಾಯ್ಕ್) ಕೋಣಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.

ADVERTISEMENT

ಹಗ್ಗ ಹಿರಿಯ ವಿಭಾಗದಲ್ಲಿ ಭಾಗವಹಿಸಿದ್ದ 12 ಜತೆ ಕೋಣಗಳ ಪೈಕಿ ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ ಅವರ ಕೋಣಗಳು (ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ) ಪ್ರಥಮ, ನಕ್ರೆ ಮಹೋಧರ ನಿವಾಸ ಇಶಾನಿ ತುಕ್ರ ಭಂಡಾರಿ ಅವರ ಕೋಣಗಳು (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ) ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.

ಹಗ್ಗ ಕಿರಿಯ ವಿಭಾಗದ 12 ಜತೆ ಕೋಣಗಳಲ್ಲಿ ಬೆಳುವಾಯಿ ಉಮನೊಟ್ಟು ಶಿವರಾಮ್ ಹೆಗ್ಡೆ ಅವರ ಕೋಣಗಳು (ಓಡಿಸಿದವರು: ಬಾರಾಡಿ ನತೀಶ್) ಪ್ರಥಮ, ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ. ಶೆಟ್ಟಿ ಅವರ ‘ಬಿ’ ಕೋಣಗಳು (ಓಡಿಸಿದವರು: ಮಾಳ ಆಧೀಶ್ ಪೂಜಾರಿ) ದ್ವಿತೀಯ ಸ್ಥಾನ ಗಳಿಸಿದವು.

ನೇಗಿಲು ಹಿರಿಯ ವಿಭಾಗದ 24 ಜತೆ ಕೋಣಗಳಲ್ಲಿ ಶ್ರೀ ಪೊಳಲಿ ಬಿರಾವುಗುತ್ತು ಪ್ರಶಾಂತ್ ಶೆಟ್ಟಿ ಅವರ ‘ಎ’ ಕೋಣಗಳು (ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ) ಪ್ರಥಮ, ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ‘ಬಿ’ ಕೋಣಗಳು (ಓಡಿಸಿದವರು: ಬಾರಾಡಿ ನತೀಶ್) ದ್ವಿತೀಯ ಸ್ಥಾನ ಗೆದ್ದುಕೊಂಡವು.

ನೇಗಿಲು ಕಿರಿಯ ವಿಭಾಗದ 85 ಜತೆ ಕೋಣಗಳಲ್ಲಿ ವೇಣೂರು ಮುಡುಕೋಡಿ ಜ್ನಾನ್ ಗಣೇಶ್ ನಾರಾಯಣ್ ಪಂಡಿತ್ ‘ಬಿ’ ಕೋಣಗಳು (ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ) ಪ್ರಥಮ ಸ್ಥಾನ, ಮಿಜಾರ್ ಹರಿಮೀನಾಕ್ಷಿ ತೋಟ ಹರಿಯಪ್ಪ ಶೆಟ್ಟಿ ಅವರ ‘ಎ’ ಕೋಣಗಳು (ಓಡಿಸಿದವರು: ಪಟ್ಟೆ ಗುರುಚರಣ್) ದ್ವಿತೀಯ ಸ್ಥಾನವನ್ನು ಪಡೆದುಕೊಂಡವು.

ಬಹುಮಾನ ವಿತರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಕಂಬಳ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಸಮಿತಿ ಅಧ್ಯಕ್ಷ ನಿತೀಶ್ ಎಚ್.ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ, ಕಂಬಳ ಸಮಿತಿ ಪದಾಧಿಕಾರಿಗಳು ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.