ADVERTISEMENT

ಮಂಗಳೂರು | ಹರೇಕಳದಲ್ಲಿ 17.4 ಸೆಂ.ಮೀ. ಮಳೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:47 IST
Last Updated 30 ಜುಲೈ 2022, 5:47 IST
   

ಮಂಗಳೂರು: ತಾಲ್ಲೂಕಿನ ಹರೇಕಳದಲ್ಲಿ 24 ಗಂಟೆಗಳಲ್ಲಿ ಗರಿಷ್ಠ (17.4 ಸೆಂ.ಮೀ) ಮಳೆಯಾಗಿದೆ.

ದಕ್ಷಿಣ ಕನ್ನಡ‌ ಜಿಲ್ಲೆಯ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರು ತಾಲ್ಲೂಕುಗಳಲ್ಲಿ ಒಟ್ಟು 19 ಗ್ರಾಮಗಳಲ್ಲಿ ಶನಿವಾರ ಬೆಳಿಗ್ಗೆ 8.30 ರ ವರೆಗೆ 24 ಗಂಟೆಗಳಲ್ಲಿ 10 ಸೆಂ.ಮೀ. ಗೂ ಅಧಿಕ ಮಳೆಯಾಗಿದೆ.

ಬಂಟ್ವಾಳ ತಾಲ್ಲೂಕಿನ ಪಜೀರುವಿನಲ್ಲಿ 14.05 ಸೆಂ.ಮೀ, ಮೇರಮಜಲುವಿನಲ್ಲಿ 13.5 ಸೆಂ.ಮೀ, ಮಂಗಳೂರು ತಾಲ್ಲೂಕಿನ ಬೊಳಿಯಾರಿನಲ್ಲಿ 13.0 ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ಮಂಚಿಯಲ್ಲಿ 12.7 ಸೆಂ.ಮೀ, ಕಳ್ಳಿಗೆಯಲ್ಲಿ 12.0 ಸೆಂ.ಮೀ, ಮಂಗಳೂರು ತಾಲ್ಲೂಕಿನ ಕೋಟೆಕಾರ್ ಮತ್ತು ಮಂಜನಾಡಿಯಲ್ಲಿ 11.5 ಸೆಂ.ಮೀ, ಗುರುಪುರದಲ್ಲಿ 11.4 ಸೆಂ.ಮೀ, ಬಡಗ ಎಡಪದವಿನಲ್ಲಿ 11.2ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ನರಿಂಗಾನದಲ್ಲಿ11.1 ಸೆಂ.ಮೀ, ಮಂಗಳೂರು ತಾಲ್ಲೂಕಿನ ನೀರುಮಾರ್ಗದಲ್ಲಿ 11.05 ಸೆಂ.ಮೀ, ಬಂಟ್ವಾಳದ ಸಜಿಪ ನಡುವಿನಲ್ಲಿ 10.8 ಸೆಂ.ಮೀ, ಮಂಗಳೂರು ತಾಲ್ಲೂಕಿನ ಕುಪ್ಪೆಪದವಿನಲ್ಲಿ 10.5 ಸೆಂ.ಮೀ, ಕಿನ್ಯ, ಪಾವೂರು ,ಮತ್ತು ಸೋಮೇಶ್ವರದಲ್ಲಿ 10.3 ಸೆಂ.ಮೀ, ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರುವಿನಲ್ಲಿ 10.2 ಸೆಂ.ಮೀ ಹಾಗೂ ಮಂಗಳೂರು ತಾಲ್ಲೂಕಿನ ತಲಪಾಡಿಯಲ್ಲಿ 10.1 ಸೆಂ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.