ADVERTISEMENT

ಮಂಗಳೂರು: ದುಬೈನಿಂದ ಬಂದ 184 ಮಂದಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 7:11 IST
Last Updated 28 ಆಗಸ್ಟ್ 2020, 7:11 IST

ಮಂಗಳೂರು: ಆಲ್‌ ಇಂಡಿಯಾ ಮುಸ್ಲಿಂ ಡೆವಲಪಮೆಂಟ್‌ ಫೋರಂ ವತಿಯಿಂದ ಆಯೋಜಿಸಿದ್ದ ಬಾಡಿಗೆ ವಿಮಾನದಲ್ಲಿ ಯುಎಇಯಿಂದ 184 ಮಂದಿ ನಗರಕ್ಕೆ ಬಂದಿಳಿದರು.

ರಾಸ್‌ ಅಲ್ ಖೈಮಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ, ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಬಂದಿಳಿಯಿತು. ಎರಡು ಶಿಶುಗಳು, ಗರ್ಭಿಣಿಯರು ಸೇರಿದಂತೆ 184 ಮಂದಿ ತಾಯ್ನಾಡಿಗೆ ಮರಳಿದರು.

ಬೆಳಿಗ್ಗೆ 4.30ಕ್ಕೆ ನಾಲ್ಕು ಬಸ್‌ಗಳಲ್ಲಿ ಶಾರ್ಜಾ ಮತ್ತು ದುಬೈನಿಂದ ರಾಸ್‌ ಅಲ್‌ ಖೈಮಾ ವಿಮಾನ ನಿಲ್ದಾಣಕ್ಕೆ ಕರೆತಂದ ಪ್ರಯಾಣಿಕರಿಗೆ ರ‍್ಯಾಪಿಡ್‌ ಟೆಸ್ಟ್‌, ಅಗತ್ಯ ಆಹಾರ, ಟಿಕೆಟ್‌ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಧ್ಯಾಹ್ನ ಇಲ್ಲಿನ ವಿಮಾಣ ನಿಲ್ದಾಣದಲ್ಲಿ ಎಲ್ಲರ ಆರೋಗ್ಯ ತಪಾಸಣೆ ನಡೆಸಿ, ಮಂಗಳೂರು, ಉಡುಪಿ, ಭಟ್ಕಳಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ಎಐಎಂಡಿಎಫ್‌ನ ಶೇಖರ್‌ ಮುಜಫ್ಫರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.