ADVERTISEMENT

ಕಾರ್ಪಾಡಿ ಸುಬ್ರಹ್ಮಣ್ಯ ದೇವಳ: 48 ದಿನ ರಂಗಪೂಜೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:51 IST
Last Updated 19 ನವೆಂಬರ್ 2021, 15:51 IST
ಬಂಟ್ವಾಳ ತಾಲ್ಲೂಕಿನ ಪೊಳಲಿ ಕ್ಷೇತ್ರದಲ್ಲಿ ಅಪ್ಪದ ಪೂಜೆ ಪ್ರಯುಕ್ತ ಶುಕ್ರವಾರಏಕಾಹ ಭಜನೆ ಕಾರ್ಯಕ್ರಮಕ್ಕೆ ದೇವಳದ ಅರ್ಚಕ ನಾರಾಯಣ ಭಟ್ ಚಾಲನೆ ನೀಡಿದರು.
ಬಂಟ್ವಾಳ ತಾಲ್ಲೂಕಿನ ಪೊಳಲಿ ಕ್ಷೇತ್ರದಲ್ಲಿ ಅಪ್ಪದ ಪೂಜೆ ಪ್ರಯುಕ್ತ ಶುಕ್ರವಾರಏಕಾಹ ಭಜನೆ ಕಾರ್ಯಕ್ರಮಕ್ಕೆ ದೇವಳದ ಅರ್ಚಕ ನಾರಾಯಣ ಭಟ್ ಚಾಲನೆ ನೀಡಿದರು.   

ಪುತ್ತೂರು: ‘ತಾಲ್ಲೂಕಿನ ಆರ್ಯಾಪು ಗ್ರಾಮದ ಕಾರ್ಪಾಡಿ ಸುಬ್ರಹ್ಮಣ್ಯ ದೇವಳದಲ್ಲಿ ನ.21ರಿಂದ ಜ. 7ರವರೆಗೆ 48 ದಿನಗಳ ಕಾಲ (ಒಂದು ಮಂಡಲ) ವಿಶೇಷ ರಂಗಪೂಜೆ ನಡೆಯಲಿದೆ’ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ. ಸುಧಾಕರ ರಾವ್ ಆರ್ಯಾಪು ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ. 7ರಂದು ದೇವಳದಲ್ಲಿ ರಂಗಪೂಜೆಯ ಸಮಾಪನ ನಡೆಯಲಿದೆ. ಜ. 8 ಮತ್ತು 9ರಂದು ಕಿರುಷಷ್ಠಿ ಜಾತ್ರೋತ್ಸವ ಹಾಗೂ ವ್ಯಾಘ್ರ್ರ ಚಾಮುಂಡಿ ನೇಮ ನಡೆಯುಲಿದೆ’ ಎಂದರು.

ಕಾರ್ಪಾಡಿ ದೇವಳಕ್ಕೆ ಪುತ್ತೂರು, ಕುಂಬ್ಳೆ, ವಿಟ್ಲ ಸೀಮೆಯ 14 ಗ್ರಾಮಗಳ ಭಕ್ತರು ಇದ್ದಾರೆ. ದೇವಳದಲ್ಲಿ ಬ್ರಹ್ಮಕಲಶೋತ್ಸವ ನಡೆದು 12 ವರ್ಷ ಕಳೆದಿದೆ. ದೇವಳದಲ್ಲಿ ಹೊಸದಾಗಿ ಸುತ್ತುಪೌಳಿ, ನಾಗನಕಟ್ಟೆ, ಗಣಪತಿಗುಡಿ, ದುರ್ಗಾಗುಡಿ ನಿರ್ಮಾಣವಾಗಲಿವೆ. ₹2ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಹಾಗೂ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಡಿ. 18ರಂದು ಒಂದು ದಿನದ ಪ್ರಶ್ನಾ ಚಿಂತನೆ ದೇವಳದಲ್ಲಿ ನಡೆಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ವ್ಯವಸ್ಥಾಪನಾ ಸಮಿತಿಯ ಸದಸ್ಯ ದೇವಯ್ಯ ಗೌಡ, ಕಿಶೋರ್ ಗೌಡ, ವಿಠಲ ರೈ, ವನಿತಾ ನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.