ADVERTISEMENT

ವಿಮಾನ ನಿಲ್ದಾಣದಲ್ಲಿ ಕ್ಯಾನ್ವಾಸ್‌ ಮೇಲೆ ಚೆಲ್ಲಿದ ರಂಗು

ಕ್ಯಾನ್ವಾಸ್‌ ಮೇಲೆ ಚಿತ್ರ ಬರೆದು ಸಂಭ್ರಮಿಸಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 13:46 IST
Last Updated 14 ಆಗಸ್ಟ್ 2021, 13:46 IST
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆರ್ಕಿಡ್‌ ಗ್ಯಾಲರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಯೋಜಿಸಿರುವ ಚಿತ್ರ ರಚಿಸುವ ಕಾರ್ಯಕ್ರಮದಲ್ಲಿ ತಮ್ಮ ಕಲಾತ್ಮಕತೆ ಮೆರೆದ ಪ್ರಯಾಣಿಕರು -ಟ್ವಿಟರ್‌ ಚಿತ್ರ
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆರ್ಕಿಡ್‌ ಗ್ಯಾಲರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಯೋಜಿಸಿರುವ ಚಿತ್ರ ರಚಿಸುವ ಕಾರ್ಯಕ್ರಮದಲ್ಲಿ ತಮ್ಮ ಕಲಾತ್ಮಕತೆ ಮೆರೆದ ಪ್ರಯಾಣಿಕರು -ಟ್ವಿಟರ್‌ ಚಿತ್ರ   

ಮಂಗಳೂರು: ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಿಸಿರುವ ‘ದಿ ಕಲರ್ ಆಫ್ ಇಂಡಿಯಾ’ ಕಲಾ ಪ್ರದರ್ಶನದಲ್ಲಿ ಪ್ರಯಾಣಿಕರು ಕ್ಯಾನ್ವಾಸ್‌ ಮೇಲೆ ಚಿತ್ರ ಬರೆದು ಸಂಭ್ರಮಿಸಿದರು.

ಆರ್ಕಿಡ್ ಗ್ಯಾಲರಿ ಸಹಯೋಗದಲ್ಲಿ ಆಗಸ್ಟ್ 15ರವರೆಗೆ ನಡೆಯಲಿರುವ ಏಕತೆ ಮತ್ತು ಸಮಗ್ರತೆಯ ಪರಿಕಲ್ಪನೆಯಈ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಯಾಣಿಕರಿಗೆ ಕ್ಯಾನ್ವಾಸ್ ಮೇಲೆ ಚಿತ್ರ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ದ್ವಾರದಲ್ಲಿ ಕ್ಯಾನ್ವಾಸ್ ಇಡಲಾಗಿದೆ. ಶನಿವಾರ ಅನೇಕ ಪ್ರಯಾಣಿಕರು ಕಲ್ಪನೆಯಲ್ಲಿ ಅರಳಿದ ಚಿತ್ರಗಳನ್ನು ಕ್ಯಾನ್ವಾಸ್‌ನಲ್ಲಿ ಮೂಡಿಸಿದರು. ಅವರಿಗೆ ಉಡುಗೊರೆಯಾಗಿ ಬುಕ್‌ಮಾರ್ಕ್‌ಗಳನ್ನು ನೀಡಲಾಯಿತು. ಮಂಗಳೂರು ಏರ್‌ಪೋರ್ಟ್ ಈ ಮಾಹಿತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ರಾಷ್ಟ್ರಪಕ್ಷಿ ನವಿಲಿನ ಚಿತ್ರ ಬಿಡಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚಿತ್ರಕಲಾ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.