ADVERTISEMENT

ಮಂಗಳೂರು: ಕಾರಿನೊಳಗೆ ತೂರಿ ಹೋದ ಅಲ್ಯುಮಿನಿಯಂ ಪಟ್ಟಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 4:06 IST
Last Updated 23 ಫೆಬ್ರುವರಿ 2023, 4:06 IST
ಕಾರಿನೊಳಗೆ ಅಲ್ಯುಮಿನಿಯಂ ಪಟ್ಟಿಗಳು ಸೇರಿಕೊಂಡಿರುವುದು
ಕಾರಿನೊಳಗೆ ಅಲ್ಯುಮಿನಿಯಂ ಪಟ್ಟಿಗಳು ಸೇರಿಕೊಂಡಿರುವುದು   

ಮಂಗಳೂರು: ಇಲ್ಲಿನ ನಂತೂರು ವೃತ್ತದ ಬಳಿ ಏಕಾಏಕಿ ಬ್ರೇಕ್‌ ಹಾಕಿದ ಪಿಕಪ್‌ ವಾಹನದಿಂದ ಅಲ್ಯುಮಿನಿಯಂ ಪಟ್ಟಿಗಳು ತೂರಿಬಂದು ಎದುರಿನಲ್ಲಿ ಹೋಗುತ್ತಿದ್ದ ಕಾರಿನೊಳಗೆ ಸೇರಿಕೊಂಡಿವೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು, ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಕೆಪಿಟಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಪಿಕಪ್ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರು. ಅವರೂ ಬ್ರೇಕ್‌ ಹಾಕಿದಾಗ ಆ ವಾಹನದಲ್ಲಿದ್ದ ಅಲ್ಯುಮಿನಿಯಂ ಪಟ್ಟಿಗಳು ಕಾರಿನೊಳಗೆ ತೂರಿಹೋಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT