ADVERTISEMENT

ಜಿಲ್ಲಾಮಟ್ಟದ ಪಿಯು ಕಾಲೇಜುಗಳ ಕುಸ್ತಿ ಪಂದ್ಯ: ಆಳ್ವಾಸ್‌ಗೆ ಅವಳಿ ಸಮಗ್ರ ಪ್ರಶಸ್ತಿ

ಜಿಲ್ಲಾಮಟ್ಟದ ಪಿಯು ಕಾಲೇಜುಗಳ ಕುಸ್ತಿ ಪಂದ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 8:30 IST
Last Updated 7 ಸೆಪ್ಟೆಂಬರ್ 2025, 8:30 IST
ಕುಂದಾಪುರದ ಗೋವಿಂದದಾಸ್ ಕಾಲೇಜಿನಲ್ಲಿ ನಡೆದ  ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟದಲ್ಲಿ ಅವಳಿ ಸಮಗ್ರ ಪ್ರಶಸ್ತಿ ಪಡೆದ ಮೂಡುಬಿದಿರೆಯ ಆಳ್ವಾಸ್ ತಂಡ 
ಕುಂದಾಪುರದ ಗೋವಿಂದದಾಸ್ ಕಾಲೇಜಿನಲ್ಲಿ ನಡೆದ  ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಕುಸ್ತಿ ಪಂದ್ಯಾಟದಲ್ಲಿ ಅವಳಿ ಸಮಗ್ರ ಪ್ರಶಸ್ತಿ ಪಡೆದ ಮೂಡುಬಿದಿರೆಯ ಆಳ್ವಾಸ್ ತಂಡ    

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಸುರತ್ಕ್‌ಲ್‌ನ ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಆಳ್ವಾಸ್ ಪಿಯು ಕಾಲೇಜು 8 ಚಿನ್ನ ಹಾಗೂ 3 ಬೆಳ್ಳಿ ಪದಕ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲೂ ಆಳ್ವಾಸ್ 6 ಚಿನ್ನ ಹಾಗೂ 3 ಕಂಚಿನೊಂದಿಗೆ ಒಟ್ಟು 9 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡು ಅವಳಿ ಪ್ರಶಸ್ತಿಗೆ ಭಾಜನವಾಯಿತು.

ಪುರುಷರ ವಿಭಾಗದಲ್ಲಿ ಆಳ್ವಾಸ್ ಸಾಧನೆ: 61 ಕೆ.ಜಿ - ಅರುಣ್ (ಪ್ರಥಮ), 65 ಕೆ.ಜಿ- ಶಶಿಕುಮಾರ್ (ಪ್ರಥಮ), ರಂಜನ್ (ದ್ವಿತೀಯ), 70 ಕೆ.ಜಿ - ಮನೋಜ್ (ಪ್ರಥಮ), 74 ಕೆ.ಜಿ - ಶಿವರಾಜ್‌ಕುಮಾರ್ (ಪ್ರಥಮ), ರಜತ್ ಬಾಸು (ದ್ವಿತೀಯ), 79 ಕೆಜಿ - ಸಂಕೇತ್ (ಪ್ರಥಮ), 86 ಕೆ.ಜಿ - ಕುಶಾಲ್ (ಪ್ರಥಮ), 92 ಕೆ.ಜಿ - ಶಮಂತ್ ಶೆಟ್ಟಿ (ಪ್ರಥಮ), ಜೇಷ್ಠ ಗೌಡ (ದ್ವಿತೀಯ), 97+ ಕೆ.ಜಿ - ಗಣೇಶ್ ಯು (ಪ್ರಥಮ) ಸ್ಥಾನ ಪಡೆದರು.

ADVERTISEMENT

ಮಹಿಳೆಯರ ವಿಭಾಗ: 50 ಕೆ.ಜಿ - ಕಾವ್ಯ ಎನ್ (ತೃತೀಯ), 53 ಕೆ.ಜಿ - ಗಂಗಮ್ಮ (ತೃತೀಯ), 55 ಕೆ.ಜಿ - ಗಂಗಮ್ಮ ಅವ್ವನವ್ವರ್ (ತೃತೀಯ), 59 ಕೆಜಿ - ಸ್ಪೂರ್ತಿ (ಪ್ರಥಮ), 62 ಕೆಜಿ - ಊರ್ಮಿಳಾ (ಪ್ರಥಮ), 65 ಕೆಜಿ - ಸೌಮ್ಯ (ಪ್ರಥಮ), 68 ಕೆಜಿ - ಚೈತಿಕಾ ಎನ್ ಎಸ್ (ಪ್ರಥಮ), 72 ಕೆ.ಜಿ - ಜಾಹ್ನವಿ ಕುರಗೋಡು (ಪ್ರಥಮ), 76 ಕೆ.ಜಿ - ನವ್ಯಶ್ರೀ (ಪ್ರಥಮ) ಸ್ಥಾನ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.