ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ 210 ಕಾಲೇಜುಗಳ ಪೈಕಿ, ವೈಯಕ್ತಿಕ ಕ್ರೀಡೆ ಮತ್ತು ಗುಂಪು ಆಟಗಳ 42 ವಿಭಾಗಗಳಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮೂಡುಬಿದಿರೆಯ ಆಳ್ವಾಸ್ ಕಾಲೇಜು, ಈ ಶೈಕ್ಷಣಿಕ ವರ್ಷದಲ್ಲೂ ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್‌ಷಿಪ್ ಆಗಿದೆ.
ಆಳ್ವಾಸ್ ಕಾಲೇಜು 23 ವರ್ಷಗಳಿಂದ ಈ ಸಾಧನೆ ಮಾಡುತ್ತಿದ್ದು, ಈ ಬಾರಿ ಪುರುಷರ, ಮಹಿಳೆಯರ ವಿಭಾಗದಲ್ಲಿ ತಲಾ 308 ಅಂಕ ಗಳಿಸಿ 616 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಪಡೆದಿದೆ.
ಅಥ್ಲೆಟಿಕ್ಸ್, ಕ್ರಾಸ್‌ಕಂಟ್ರಿ, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ, ಕೊಕ್ಕೊ, ವಾಲಿಬಾಲ್, ಬ್ಯಾಡ್ಮಿಂಟನ್, ಹ್ಯಾಂಡ್‌ಬಾಲ್, ಸಾಪ್ಟ್‌ಬಾಲ್, ವೇಟ್ ಲಿಫ್ಟಿಂಗ್, ಪವರ್ ಲಿಫ್ಟಿಂಗ್, ಬೆಸ್ಟ್ ಫಿಸಿಕ್, ಕ್ರಿಕೆಟ್, ಚೆಸ್, ಕರಾಟೆ, ಟೇಬಲ್ ಟೆನ್ನಿಸ್, ನೆಟ್ಬಾಲ್, ಹಾಕಿ, ಫುಟ್‌ಬಾಲ್, ಕುಸ್ತಿ, ಟಗ್ ಆಫ್ ವಾರ್ ಸೇರಿದಂತೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಮಂಗಳೂರು ವಿವಿಯು ಸ್ಥಾನ ನೀಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.