ADVERTISEMENT

ಆಳ್ವಾಸ್‌ನಲ್ಲಿ ಪ್ರಾಣ ಪ್ರಕೃತಿ ಚಿಕಿತ್ಸಾ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 5:56 IST
Last Updated 31 ಅಕ್ಟೋಬರ್ 2025, 5:56 IST
ಮೂಡುಬಿದಿರೆಯ ಮಿಜಾರಿನ ಆನಂದ ಆರೋಗ್ಯಧಾಮದಲ್ಲಿ ‘ಪ್ರಾಣ’ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಮಂಗಳೂರಿನ ಆಸರೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಉದ್ಘಾಟಿಸಿದರು
ಮೂಡುಬಿದಿರೆಯ ಮಿಜಾರಿನ ಆನಂದ ಆರೋಗ್ಯಧಾಮದಲ್ಲಿ ‘ಪ್ರಾಣ’ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಮಂಗಳೂರಿನ ಆಸರೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಉದ್ಘಾಟಿಸಿದರು   

ಮೂಡಬಿದಿರೆ: ಪ್ರತಿ ಜ್ಞಾನೇಂದ್ರೀಯವನ್ನೂ ಪ್ರಕೃತಿಯೇ ಅದ್ಭುತವಾಗಿ ಸೃಷ್ಟಿಸಿದೆ. ಇವುಗಳ ಸಮತೋಲನ ಮತ್ತು ಸಾಮರಸ್ಯ ಮಾನವನ ಮನಸ್ಸು, ದೇಹ ಹಾಗೂ ಆತ್ಮದ ಶಾಂತಿಗೆ ಆಧಾರವಾಗಿವೆ. ಪಂಚೇಂದ್ರಿಯಗಳ ಪ್ರಜ್ಞಾಪೂರ್ವಕ ಸಂತೃಪ್ತಿಯ ಮೂಲಕ ಸಮಗ್ರ ಆರೋಗ್ಯವನ್ನು ಪಡೆಯಬಹುದು ಎಂದು ಆಸರೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾ ಜ್ಯೋತಿ ರೈ ಹೇಳಿದರು.

ಮಿಜಾರಿನ ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಸಮಗ್ರ ಸ್ವಾಸ್ಥ್ಯಧಾಮ ಪ್ರಾಣ ಪ್ರಕೃತಿ ಚಿಕಿತ್ಸಾ ಕೇಂದ್ರವನ್ನು ಗುರುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಗಾಯಕಿ ಅಖಿಲಾ ಪಜಿಮಣ್ಣು ಮಾತನಾಡಿ, ನಮ್ಮ ಬದುಕು ಪ್ರಕೃತಿಯೊಂದಿಗೆ ಸಾಗಬೇಕು. ಪ್ರಕೃತಿಯೊಡನೆ ಹೆಜ್ಜೆ ಹಾಕಿದಾಗಲೇ ನೆಮ್ಮದಿಯ ಜೀವನ ಸಾಧ್ಯ ಎಂದು ಹೇಳಿದರು.

ADVERTISEMENT

‘ಪ್ರಾಣ’ ಪ್ರಕೃತಿ ಚಿಕಿತ್ಸಾ ಕೇಂದ್ರದ ನಿರ್ದೇಶಕಿ ಡಾ.ಗ್ರೀಷ್ಮಾ ವಿವೇಕ್ ಆಳ್ವ ಮಾತನಾಡಿ, ಪರಿಪೂರ್ಣ ಪ್ರಾಕೃತಿಕ ಉತ್ಪನ್ನಗಳ ಬಳಕೆಯಿಂದ ಇಂದ್ರಿಯಗಳಿಗೆ ಸಂತೋಷ ನೀಡುವ ಮತ್ತು ನೈಜ ಕಾಂತಿಯನ್ನು ವೃದ್ಧಿಸುವ ಅವಕಾಶ ಇಲ್ಲಿದೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿ, ಔಷಧವಿಲ್ಲದೆ ರೋಗವನ್ನು ಗುಣಪಡಿಸುವ ಪ್ರಕೃತಿ ಚಿಕಿತ್ಸೆ ಪದ್ಧತಿ ಈಗ ವಿಶ್ವಮಟ್ಟದಲ್ಲಿ ಮಾನ್ಯತೆ ಪಡೆದಿದೆ ಎಂದು ಹೇಳಿದರು.

ಜಯಶ್ರೀ ಅಮರನಾಥ್ ಶೆಟ್ಟಿ, ಉದ್ಯಮಿ ಕೆ.ಶ್ರೀಪತಿ ಭಟ್, ಕುಲದೀಪ್ ಎಂ., ವಿವೇಕ ಆಳ್ವ, ಡಾ.ಹನಾ ಭಾಗವಹಿಸಿದ್ದರು. ಡಾ.ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.