ADVERTISEMENT

ದ.ಕ: ಸಮಗ್ರ ಚಾಂಪಿಯನ್‌ಷಿಪ್ ಗೆದ್ದ ಆಳ್ವಾಸ್ ತಂಡ

ರಾಜ್ಯಮಟ್ಟದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:09 IST
Last Updated 22 ನವೆಂಬರ್ 2025, 6:09 IST
ಮೂಡುಬಿದಿರೆಯಲ್ಲಿ ಗುರುವಾರ ಸಮಾರೋಪಗೊಂಡ 23ನೇ ರಾಜ್ಯಮಟ್ಟದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟದಲ್ಲಿ ಆಳ್ವಾಸ್ ತಂಡ ಸಮಗ್ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿತು
ಮೂಡುಬಿದಿರೆಯಲ್ಲಿ ಗುರುವಾರ ಸಮಾರೋಪಗೊಂಡ 23ನೇ ರಾಜ್ಯಮಟ್ಟದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟದಲ್ಲಿ ಆಳ್ವಾಸ್ ತಂಡ ಸಮಗ್ರ ಚಾಂಪಿಯನ್‌ಷಿಪ್‌ ಗೆದ್ದುಕೊಂಡಿತು   

ಮೂಡುಬಿದಿರೆ: ಎರಡು ಕೂಟ ದಾಖಲೆಗಳನ್ನು ಬರೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಇಲ್ಲಿನ ಸ್ವರಾಜ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ಅಂತರ ಕಾಲೇಜು ವಾರ್ಷಿಕ ಅಥ್ಲೆಟಿಕ್ಸ್‌ನಲ್ಲಿ ಪುರುಷ ಮತ್ತು ಮಹಿಳಾ ಚಾಂಪಿಯನ್‌ಷಿಪ್‌ ಸಹಿತ ಎರಡು ವಿಭಾಗದ ಸಮಗ್ರ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಆಳ್ವಾಸ್ ಆಯುರ್ವೇ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಬೆಂಗಳೂರಿನ ಗಂಗೋತ್ರಿ ನರ್ಸಿಂಗ್ ಕಾಲೇಜಿನ ಆಕಾಶ್ ಬೆನಡಿಕ್ಟ್ ಹಾಗೂ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಅನುರಾಧಾ ರಾಣಿ, ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು.

ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಕಾಲೇಜು ಕ್ರಮವಾಗಿ 48 ಹಾಗೂ 60 ಅಂಕಗಳನ್ನು ಪಡೆದು ಸಮಗ್ರ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. 108 ಅಂಕಗಳೊಂದಿಗೆ ಕಾಲೇಜು ಸಮಗ್ರ ತಂಡ ಪ್ರಶಸ್ತಿ ಗೆದ್ದುಕೊಂಡಿತು.

ADVERTISEMENT

ನೂತನ ಕೂಟ ದಾಖಲೆ: ಲಾಂಗ್ ಜಂಪ್‌ನಲ್ಲಿ ಆಳ್ವಾಸ್‌ನ ಅನುರಾಧಾ ರಾಣಿ ನೂತನ ಕೂಟ ದಾಖಲೆ ನಿರ್ಮಿಸಿದರೆ ಟ್ರಿಪಲ್ ಜಂಪ್‌ನಲ್ಲಿ ಆಳ್ವಾಸ್‌ನ ಸ್ವಾತಿ ಸಿಂಗ್ ಕೂಟ ದಾಖಲೆ ಬರೆದರು. ಗುರುವಾರ ಸಂಜೆ ನಡೆದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ ಡಾ.ಶರಣ ಶೆಟ್ಟಿ ಮಾತನಾಡಿದರು.

ಕ್ರೀಡಾಕೂಟದ ವೀಕ್ಷಕರಾದ ಡಾ.ಅನಿಲ್ ಜೋಸೆಫ್, ಡಾ.ಜಯಕುಮಾರ್, ಆಳ್ವಾಸ್ ಟ್ರಸ್ಟಿ ಡಾ.ವಿನಯ್ ಆಳ್ವ, ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಡಾ.ಯತಿಕುಮಾರಸ್ವಾಮಿಗೌಡ, ನ್ಯಾಚುರೋಪಥಿ ಕಾಲೇಜು ಪ್ರಾಚಾರ್ಯೆ ಡಾ.ವನಿತಾ ಶೆಟ್ಟಿ, ಆಳ್ವಾಸ್‌ನ ದೈಹಿಕ ಶಿಕ್ಷಣ ನಿರ್ದೇಶಕ ಅವಿನಾಶ್ ಎಸ್., ಆಯ್ಕೆ ಸಮಿತಿ ಸದಸ್ಯರಾದ ಶ್ರದ್ಧಾ ಶೆಟ್ಟಿ, ಹರೀಶ ಗೌಡ ಭಾಗವಹಿಸಿದ್ದರು.

ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲೆ ಡಾ.ಸುಶೀಲ ಶೆಟ್ಟಿ ವಂದಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.