ADVERTISEMENT

ಮೂಡುಬಿದಿರೆ | ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಅವಕಾಶ ಸಿಗಲಿ: ಧರ್ಮರಾಜ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 7:32 IST
Last Updated 27 ಡಿಸೆಂಬರ್ 2025, 7:32 IST
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮವನ್ನು ‘ಅಪೇಡಾ’ದ ಎಜಿಎಂ ಧರ್ಮರಾಜ್ ಉದ್ಘಾಟಿಸಿದರು
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಕೃಷಿ ಉತ್ಪನ್ನಗಳ ಮಾರುಕಟ್ಟೆ ಮಾಹಿತಿ ಕಾರ್ಯಕ್ರಮವನ್ನು ‘ಅಪೇಡಾ’ದ ಎಜಿಎಂ ಧರ್ಮರಾಜ್ ಉದ್ಘಾಟಿಸಿದರು   

ಮೂಡುಬಿದಿರೆ: ಭಾರತದಲ್ಲಿ ಬೆಳೆಯುವ ಹಲವು ಕೃಷಿ ಉತ್ಪನ್ನಗಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯ ಅವಕಾಶಗಳು ರೈತರಿಗೆ ಸಿಗಬೇಕು ಎಂದು ‘ಅಪೇಡಾ’ದ ಎಜಿಎಂ ಧರ್ಮರಾಜ್ ಹೇಳಿದರು.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ಕೃಷಿ ವಿಜ್ಞಾನ ಕೇಂದ್ರ ಕಂಕನಾಡಿ, ತೋಟಗಾರಿಕೆ ಇಲಾಖೆ ಮಂಗಳೂರು, ರೈತ್ಯ ಜನ್ಯ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆಯ ಆಶ್ರಯದಲ್ಲಿ ಸಮಾಜ ಮಂದಿರದಲ್ಲಿ ನಡೆದ ರಫ್ತು ಅವಕಾಶಗಳು ಮತ್ತು ಉತ್ತಮ ಕೃಷಿ ಪದ್ಧತಿ ಸಂವೇದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪೇಡಾದ ಪೂಜಾ, ಕಾರಂತ್ ಬಿ., ಕೃಷಿ ವಿವಿ ಕೇಂದ್ರದ ರಶ್ಮಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಬಳಿಕ ರೈತರೊಂದಿಗೆ ಸಂವಾದ ನಡೆಸಲಾಯಿತು. ಕೃಷಿ ವಿವಿ ಕೇಂದ್ರದ ಅಜಯ್ ಕುಮಾರ್, ರೈತ ಜನ್ಯ ಕಂಪನಿಯ ಲಿಯೊ ವಾಲ್ಟರ್ ನಝರತ್ ಭಾಗವಹಿಸಿದ್ದರು.

ADVERTISEMENT

ಕೃಷಿ ವಿವಿ ಕೇಂದ್ರದ ಮುಖ್ಯಸ್ಥ ಡಿ.ಜಿ.ರಮೇಶ್ ಸ್ವಾಗತಿಸಿದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.