ಮೂಡುಬಿದಿರೆ: ಹಲವು ಗೋವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಗಂಟಾಲ್ಕಟ್ಟೆಯ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬುಧವಾರ ಬಂಧಿಸಿ ಎರಡು ಕಾರುಗಳನ್ನು ವಶಕ್ಕೆ ಪಡಕೊಂಡಿದ್ದಾರೆ.
ಡಿ. 14ರಂದು ಬಡಗ ಎಡಪದವು ಗ್ರಾಮದ ಕಿನ್ನಿಮಜಲು ನಿವಾಸಿ ಚಂದನ್ ಉಪಾಧ್ಯಾಯ ಎಂಬವರು ಮೇಯಲು ಬಿಟ್ಟ 2 ಹಸು ಮತ್ತು 1 ಕರುವನ್ನು ಗೋಕಳ್ಳರು ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ತೆಂಕ ಎಡಪದವು ಗ್ರಾಮದ ದಡ್ಡಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ನಾಸೀರ್ ಯಾನೆ ನಾಚಿ ಮತ್ತು ಪಡುಕೊಣಾಜೆ ಗ್ರಾಮ ನೀರಲ್ಕೆ ನಿವಾಸಿ ಇಮ್ರಾನ್ ಯಾನೆ ಇಬ್ರಾಹಿಂನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.