ಸುಳ್ಯ: ಇಲ್ಲಿ ಆಧಾರ್ ಕೇಂದ್ರ ಸ್ಥಾಪನೆಗೆ ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಲಾಗುವುದು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಸೋಮವಾರ ಇಲ್ಲಿ ನಡೆದ ಯುವ ವಿಕಾಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೆಳೆವಿಮೆ ಪ್ರತಿ ಸಲ ಜೂನ್ ತಿಂಗಳಲ್ಲಿ ಸಿಗುತ್ತಿತ್ತು. ಈ ಬಾರಿ ಇನ್ನೂ ಆಗಲಿಲ್ಲ. ಮಳೆ ವಿಪರೀತವಾಗಿ ಬೆಳೆ ನಷ್ಟವಾಗಿದೆ. ಆದ್ದರಿಂದ ಆದಷ್ಟು ಶೀಘ್ರ ವಿಮೆಗೆ ಅವಕಾಶ ನೀಡಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಕೋರಿದರು.
ಸುಳ್ಯ ಭಾಗದ ಹಲವು ಭಾಗದಲ್ಲಿ ಆನೆ ಹಾವಳಿ ಹೆಚ್ಚಾಗಿದೆ. ಆದ್ದರಿಂದ ಸೋಲಾರ್ ಬೇಲಿ ಸ್ಥಾಪನೆಗೆ ವ್ಯವಸ್ಥೆ ಮಾಡಬೇಕು. ಪ್ರಕೃತಿ ವಿಕೋಪದ ಪರಿಹಾರದಡಿ ಸುಳ್ಯಕ್ಕೆ ಹೆಚ್ಚು ಅನುದಾನ ಬರುವಂತೆ ಮಾಡಬೇಕು ಎಂದು ಶಾಸಕರು ಕೇಳಿಕೊಂಡರು.
ಆಧಾರ್ ಕೇಂದ್ರ ಅವಶ್ಯಕತೆ ಕುರಿತು ಹಲವರು ಪ್ರಸ್ತಾಪಿಸಿದರು. ಸುಳ್ಯಕ್ಕೆ ಆಧಾರ್ ಕೇಂದ್ರದ ಆರಂಭಕ್ಕೆ ಜಿಲ್ಲಾಧಿಕಾರಿ ಬಳಿ ಮಾತನಾಡುವೆ ಎಂದು ಸಂಸದ ಬ್ರಿಜೇಶ್ ಚೌಟ ಭರವಸೆ ನೀಡಿದರು.
ಜಾಗದ ವಿಚಾರಕ್ಕೆ ಸಂಬಂಧ ಮನವಿಯೊಂದು ಬಂದಾಗ ಸಂಸದರು ತಹಶೀಲ್ದಾರ್ ಎಲ್ಲಿ ಎಂದು ಕೇಳಿದರು. ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಮಂಜುಳಾ ಅವರಿಗೆ ಸಂಸದರು ಬರುವಾಗ ಇಲ್ಲಿ ಇರಬೇಕು ಎಂದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು. ನನಗೆ ಮಾಹಿತಿ ಇರಲಿಲ್ಲ ಎಂದು ತಹಶೀಲ್ದಾರ್ ಹೇಳಿದಾಗ ತಹಶೀಲ್ದಾರ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.