ಬದಿಯಡ್ಕ: ಎಣ್ಮಕಜೆ ಗ್ರಾಮ ಪಂಚಾಯಿತಿಗೆ ಸೇರಿದ, ಉಕ್ಕಿನಡ್ಕದಲ್ಲಿ ಇರುವ ಸರ್ಕಾರಿ ಸ್ಥಳಗಳನ್ನು ಗ್ರಾಮಾಧಿಕಾರಿಯು ಲಂಚದ ಅಮಿಷದಿಂದ ಅನರ್ಹರ ಹೆಸರಿನಲ್ಲಿ ದಾಖಲೆ ತಯಾರಿಸುತ್ತಿದ್ದ ಬಗ್ಗೆ ಮಂಜೇಶ್ವರ ತಾಲ್ಲೂಕಿನ ಭೂ ಹಂಚಿಕೆ ಸಭೆಗೆ ಫಲಾನುಭವಿಗಳು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರಿಂದ ಉಪ ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಭೆಗೆ ಮುತ್ತಿಗೆ ಹಾಕಿದ್ದ ವೇಳೆ ಶಾಸಕರ ಸಹಿತ ಸ್ಥಳದಲ್ಲಿದ್ದ ಜನಪ್ರತಿನಿಧಿಗಳು ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದರು.
ಮಂಜೇಶ್ಚರದ ಉಪ ತಹಶೀಲ್ದಾರ್ ಶ್ರೀಜಿತ್, ಪೆರ್ಲ ಗ್ರಾಮಾಧಿಕಾರಿ ಹಮೀದ್ ಮತ್ತು ತಂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹೈಕೋರ್ಟ್ ಆದೇಶ ಹೊರಡಿಸುವವರೆಗೆ ವಿವಾದಿತ ಸ್ಥಳದಲ್ಲಿ ಭೂಮಿ ಹಂಚಿಕೆಯನ್ನು ತಡೆ ಹಿಡಿಯುವಂತೆ ಎಣ್ಮಕಜೆ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಸಮ್ಮುಖದಲ್ಲಿ ತೀರ್ಮಾನ ಕೈಗೊಂಡಿರುವುದಾಗಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.