ADVERTISEMENT

ಮಂಗಳೂರಲ್ಲಿ ಯುವಕ–ಯುವತಿಯರ ಹೋಳಿ ಆಚರಣೆಗೆ ಬಜರಂಗದಳದಿಂದ ಅಡ್ಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 10:19 IST
Last Updated 26 ಮಾರ್ಚ್ 2023, 10:19 IST
ಸಾಂದರ್ಭಿಕ ಚಿತ್ರಂ
ಸಾಂದರ್ಭಿಕ ಚಿತ್ರಂ   

ಮಂಗಳೂರು: 'ನಗರದ ಮರೋಳಿ ಎಂಬಲ್ಲಿ ಯುವಕ ಯುವತಿಯರು ಹೋಳಿ ಆಚರಣೆ ನಡೆಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಹಾಗೂ ಸ್ಥಳೀಯರು ದಾಳಿ ನಡೆಸಿ ಅಡ್ಡಿಪಡಿಸಿದ್ದಾರೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮರೋಳಿಯ 'ಸೂರ್ಯ ವುಡ್ಸ್ 'ನಲ್ಲಿ ಅರ್ಜುನ್ ಎಂಬವರು ಹೋಳಿ ಆಚರಣೆಗೆ ಅನುಮತಿ ಪಡೆದಿದ್ದರು. ಭಾನುವಾರ ಮಧ್ಯಾಹ್ನ ಕೆಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೋಳಿ ಆಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಜರಂಗದಳದವರು ದಾಳಿ ನಡೆಸಿ ಅಡ್ಡಿಪಡಿಸಿದರು. ಕಾರ್ಯಕ್ರಮದ ಕುರಿತು ಅಳವಡಿಸಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದರು. ವಿದ್ಯಾರ್ಥಿಗಳು ತುಂಡುಡುಗೆ ತೊಟ್ಟಿದ್ದಕ್ಕೆ ಹಾಗೂ ಧ್ವನಿವರ್ಧಕ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕಾರ್ಯಕ್ರಮ ಆಯೋಜಕರು ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕ್ಕಮಕಿಯು ನಡೆಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಕಂಕನಾಡಿ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ. 'ಮರೋಳಿಯಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಸ್ಥಳಕ್ಕೆ ಹೋಗಿ ನೋಡಿದಾಗ ಕೆಲವರು ಬ್ಯಾನರ್ ಗಳನ್ನು ಹರಿದಿದ್ದರು. ಈ ರೀತಿ ದಾಂದಲೆ ನಡೆಸಿದ ಆರು ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಈ ಘಟನೆಯಿಂದ ಬೇಸತ್ತು ಆಯೋಜಕರು ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ' ಎಂದು ಪೊಲೀಸ್ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.