
ಮಂಗಳೂರು: ತಾಲ್ಲೂಕಿನ ಬಜಪೆ ಪಟ್ಟಣ ಪಂಚಾಯಿತಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ.
ಬಜಪೆ ಪಟ್ಟಣ ಪಂಚಾಯಿತಿಯ ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ 4, ಎಸ್‌ಡಿಪಿಐ 3 ಹಾಗೂ ಪಕ್ಷೇತರ ಒಂದು ಸ್ಥಾನದಲ್ಲಿ ಗೆದಿದ್ದಾರೆ. ಬುಧವಾರ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ಮಾತಗಳ ಎಣಿಕೆ ನಡೆಯಿತು. ಬಜಪೆಯ 19 ವಾರ್ಡ್‌ಗಳಿಗೆ 59 ಅಭ್ಯರ್ಥಿಗಳು ಕಣದಲ್ಲಿದ್ದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಲ್ಲಿ ಬಿಜೆಪಿ 10, ಕಾಂಗ್ರೆಸ್ 8 ಸ್ಥಾನ ಗಳಿಸಿವೆ. 42 ಅಭ್ಯರ್ಥಿಗಳು ಕಣದಲ್ಲಿದ್ದರು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಲ್ಲಿ ಮತ ಎಣಿಕೆ ನಡೆಯಿತು.
ಡಿ.21ರಂದು ಮತದಾನ ನಡೆದಿತ್ತು. ಬಜಪೆ ಶೇ 64 ಹಾಗೂ ಕಿನ್ನಿಗೋಳಿ ಶೇ 69.36ರಷ್ಟು ಮತದಾನವಾಗಿತ್ತು.
ಬಜಪೆ ಹಾಗೂ ಮಳವೂರು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಬಜಪೆ ಪಟ್ಟಣ ಪಂಚಾಯಿತಿಯನ್ನು 2021ರ ಏಪ್ರಿಲ್‌ನಲ್ಲಿ ರಚಿಸಲಾಗಿತ್ತು. ಈ ಪಟ್ಟಣ ಪಂಚಾಯಿತಿಗೆ ಮೊದಲ ಬಾರಿಗೆ ಈಗ ಚುನಾವಣೆ ನಡೆಯಿತು.
ಬಜಪೆ ಹಾಗೂ ಮಳವೂರು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಬಜಪೆ ಪಟ್ಟಣ ಪಂಚಾಯಿತಿ ರಚಿಸಲಾಗಿತ್ತು. ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯನ್ನು ರಚಿಸಲಾಗಿತ್ತು. ಇವೆರಡೂ 2021ರಲ್ಲಿಯೇ ರಚನೆಯಾಗಿದ್ದರೂ ಮೊದಲ ಬಾರಿಗೆ ಈಗ ಚುನಾವಣೆ ನಡೆಯಿತು.
ಬಜಪೆ ಪಟ್ಟಣ ಪಂಚಾಯಿತಿ ವಿಜೇತರ ವಿವರ:
ವಾರ್ಡ್ 1: ಯಶೋಧ (ಬಿಜೆಪಿ)
ವಾರ್ಡ್ 2: ಪದ್ಮನಾಭ ಪೂಜಾರಿ (ಬಿಜೆಪಿ)
ವಾರ್ಡ್ 3:ಜಾಕೋಬ್ ಪಿರೇರಾ (ಕಾಂಗ್ರೆಸ್ )
ವಾರ್ಡ್ 4: ಸಿರಾಜ್ ಬಜಪೆ (ಪಕ್ಷೇತರ)
ವಾರ್ಡ್ 5: ಗುಲ್ಸನ್ ಕರೀಂ (ಎಸ್‌ಡಿಪಿಐ)
ವಾರ್ಡ್ 6: ವೀಣಾ ಡಿಸೋಜಾ (ಎಸ್‌ಡಿಪಿಐ)
ವಾರ್ಡ್ 7: ಆಯಿಷಾ ಬಜಪೆ (ಎಸ್‌ಡಿಪಿಐ)
ವಾರ್ಡ್ 8: ಲೋಕೇಶ್ ಪೂಜಾರಿ (ಬಿಜೆಪಿ)
ವಾರ್ಡ್ 9: ರಿತೇಶ್ ಶೆಟ್ಟಿ (ಬಿಜೆಪಿ )
ವಾರ್ಡ್ 10: ಶರ್ಮಿಳಾ ಶೆಟ್ಟಿ (ಬಿಜೆಪಿ )
ವಾರ್ಡ್ 11: ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ )
ವಾರ್ಡ್ 12: ಕಿರಣ್ (ಕಾಂಗ್ರೆಸ್ )
ವಾರ್ಡ್ 13: ಸುಪ್ರೀತಾ ಶೆಟ್ಟಿ (ಬಿಜೆಪಿ )
ವಾರ್ಡ್ 14: ಹಾಜಿರಾ ಫರ್ಜಾನಾ (ಕಾಂಗ್ರೆಸ್ )
ವಾರ್ಡ್ 15: ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ )
ವಾರ್ಡ್ 16: ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ )
ವಾರ್ಡ್ 17: ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ )
ವಾರ್ಡ್ 18: ರಕ್ಷಿತಾ ಶರತ್ (ಬಿಜೆಪಿ )
ವಾರ್ಡ್ 19: ಜಯಂತ್ ಪೂಜಾರಿ (ಬಿಜೆಪಿ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.