ಮೂಲ್ಕಿ: ಮಹಿಳೆಯ ಅಧ್ಯಕ್ಷತೆಯಲ್ಲಿ ನಡೆಯುವ ಬಳ್ಕುಂಜೆ ಕಂಬಳ ಅವಿಸ್ಮರಣೀಯವಾಗಿದ್ದು, ಇದು ಹೆಮ್ಮೆಯ ವಿಚಾರವಾಗಿದೆ. ಎಲ್ಲರೂ ಊರಿನ ಕಂಬಳವನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಎರ್ಮಾಳ್ ರೋಹಿತ್‌ಕುಮಾರ್ ಹೆಗ್ಡೆ ಹೇಳಿದರು.
ಬಳ್ಕುಂಜೆ ಕಂಬಳ ಸಮಿತಿಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಳ್ಕುಂಜೆ ಕಂಬಳ ಸಮಿತಿ ಅಧ್ಯಕ್ಷೆ ಬಳ್ಕುಂಜೆಗುತ್ತು ಮಲ್ಲಿಕಾ ಶೆಟ್ಟಿ ಅಧ್ಯಕ್ಷೆತೆ ವಹಿಸಿದ್ದರು.
ಕೊಳಚೂರು ಕೊಂಡ್ಯೋಟ್ಟು ಸುಕುಮಾರ್ ಶೆಟ್ಟಿ, ಬಾಲಕೃಷ್ಣ ಹೆಗ್ಡೆ ಕೊಟ್ನಾಯಗುತ್ತು, ಉಳೆಪಾಡಿ ಬಾಲಕೃಷ್ಣ ಶೆಟ್ಟಿ, ಉಳೆಪಾಡಿ ಚಿತ್ತರಂಜನ್ ಶೆಟ್ಟಿ, ಪ್ರಭಾಕರ ಪೂಂಜ, ದಿವಾಕರ ಚೌಟ, ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ, ಕವತ್ತಾರು ಶರತ್ ಅಜಿಲ, ಕೃಷ್ಣ ಶೆಟ್ಟಿ, ಪ್ರಕಾಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಲಾನ್ಸಿ ಡಿಸೋಜ, ಪ್ರಸಾದ್ ಶೆಟ್ಟಿ, ರಂಜನ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಗಣೇಶ್ ಶೆಟ್ಟಿ ಇನ್ನಾ, ನೆಲ್ಸನ್ ಲೋಬೊ ಭಾಗವಹಿಸಿದ್ದರು.
ಮುಂಡ್ಕೂರು ದೊಡ್ಡಮನೆ ಶರತ್ ಶೆಟ್ಟಿ ಸ್ವಾಗತಿಸಿದರು. ದಿನಕರ ಶೆಟ್ಟಿ ಬಳ್ಕುಂಜೆ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.