ADVERTISEMENT

ಬಂಟ್ವಾಳ: ಸಿದ್ಧಗೊಂಡ ನಂತರ ಪಾಳು ಬಿದ್ದ ಸ್ಮಶಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2025, 10:58 IST
Last Updated 15 ಜನವರಿ 2025, 10:58 IST
<div class="paragraphs"><p>ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಳವಡಿಸಲಾದ ಚಿತಾಗಾರದ ಕಬ್ಬಿಣದ ಬಕೆಟ್ ಕಳ್ಳರು ದೋಚಿದ್ದಾರೆ</p></div>

ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಹಿಂದೂ ರುದ್ರಭೂಮಿಯಲ್ಲಿ ಅಳವಡಿಸಲಾದ ಚಿತಾಗಾರದ ಕಬ್ಬಿಣದ ಬಕೆಟ್ ಕಳ್ಳರು ದೋಚಿದ್ದಾರೆ

   

ಬಂಟ್ವಾಳ: ತಾಲ್ಲೂಕಿನ ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ವರ್ಷಗಳ ಹಿಂದೆ ನಿರ್ಮಾಣಗೊಂಡ ಹಿಂದೂ ರುದ್ರಭೂಮಿ ಉದ್ಘಾಟನೆಗೆ ಮೊದಲೇ ಪಾಳು ಬಿದ್ದಿದೆ. ಚಿತಾಗಾರದಲ್ಲಿದ್ದ ಕಬ್ಬಿಣದ ಬಕೆಟ್ ಕಳ್ಳರ ಪಾಲಾಗಿದೆ.

ರುದ್ರಭೂಮಿ ಬೇಕೆಂಬುದು ಗ್ರಾಮದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಇದಕ್ಕಾಗಿ ಮೀಸಲಿಟ್ಟ 80 ಸೆಂಟ್ಸ್ ಜಮೀನಿನಲ್ಲಿ ಗ್ರಾಮ ಪಂಚಾಯಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಉದ್ಯೋಗ ಖಾತರಿ ಯೋಜನೆಯಡಿ ರುದ್ರಭೂಮಿ ನಿರ್ಮಾಣ ಆಗಿತ್ತು. ಚಿತಾಗಾರ, ಕಟ್ಟಿಗೆ ಶೇಖರಣೆ ಕೊಠಡಿ ಇತ್ಯಾದಿ ನಿರ್ಮಾಣಗೊಂಡಿತ್ತು. ವಿದ್ಯುತ್ ಮತ್ತು ನೀರಿನ ಸಂಪರ್ಕ ಸಿಗುವುದು ಉಳಿದಿತ್ತು.

ADVERTISEMENT

ಮೃತದೇಹ ಸುಡುವ ಎರಡು ಕಬ್ಬಿಣದ ಬಕೆಟ್‌ಗಳು ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಕಳವಾಗಿವೆ. ಕಳವಾಗಿರುವ ಬಗ್ಗೆ ಪೊಲೀಸರಿಗೂ ಜನಪ್ರತಿನಿಧಿಗಳಿಗೂ ದೂರು ನೀಡಲಾಗಿದೆ ಆದರೆ ಯಾವ ಪ್ರಯೋಜನವೂ ಆಗಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಸ್ಮಶಾನದ ಸುತ್ತಲೂ ಪೊದೆ ಮತ್ತು ಗಿಡ ಬಳ್ಳಿ ಆವರಿಕೊಂಡಿದ್ದು ಕೆಲವೆಡೆ ಕಸ ಹಾಗೂ ಮಣ್ಣಿನ ರಾಶಿ ಬಿದ್ದು ಹೊರಗೆ ಕಾಣಿಸದಂತಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಜನರು ಅಂತ್ಯಸಂಸ್ಕಾರಕ್ಕಾಗಿ ಈಗ ಬಂಟ್ವಾಳ ಬಡ್ಡಕಟ್ಟೆ ಸ್ಮಶಾನವನ್ನು ಅವಲಂಬಿಸಿದ್ದಾರೆ.

ಕಬ್ಬಿಣದ ಬಕೆಟ್ ಕಳವಾಗಿರುವುದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸ್ಮಶಾನ ನಿರ್ವಹಣಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಆರೋಪಿಸಿದ್ದಾರೆ. ಬಕೆಟ್ ಅಳವಡಿಸಿ, ಆವರಣ ಗೋಡೆ ನಿರ್ಮಿಸಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಚಿಂತನೆ ಇದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಜನಾರ್ದನ ಕೊಂಬೆಟ್ಟು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.