ಬೆಳ್ತಂಗಡಿ: ಒಂಬತ್ತು ತಿಂಗಳುಗಳ ಹಿಂದೆ ವಿವಾಹವಾಗಿದ್ದ ವ್ಯಕ್ತಿಯೊಬ್ಬ, ಪತ್ನಿಯ ಸಹೋದರಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ಸಂಬಂಧ ವಿವಾಹಿತೆಯ ತಂದೆ ಬೆಳ್ತಂಗಡಿ ಠಾಣೆ
ಯಲ್ಲಿ ದೂರು ದಾಖಲಿಸಿದ್ದಾರೆ.
ತಾಲ್ಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಸಮೀಪದ ಮುಹಮ್ಮದ್ ಅವರ ಪುತ್ರಿಯನ್ನು ಮುಸ್ತಫಾ ಎಂಬ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಪತಿ–ಪತ್ನಿಯ ನಡುವೆ ಮನಸ್ತಾಪ ಉಂಟಾಗಿ, ಪತ್ನಿ ತವರು ಮನೆಯಲ್ಲಿದ್ದರು. ಗುರುವಾರ ತಾಯಿಯೊಂದಿಗೆ ಮಾವನ ಮನೆಗೆ ಬಂದ ಮುಸ್ತಫಾ, ನಾದಿನಿಯನ್ನು ಕರೆದುಕೊಂಡು ಹೋಗಿದ್ದು, ಕಿರಿಯ ಪುತ್ರಿ ಮನೆಗೆ ಬಂದಿಲ್ಲವೆಂದು ತಂದೆ ಮುಹಮ್ಮದ್ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.