
ಬೆಳ್ತಂಗಡಿ: ಚಿನ್ನವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮನೆಗೆ ಬಂದು ರಾಸಾಯನಿಕ ಬಳಸಿ ಚಿನ್ನವನ್ನು ಕರಗಿಸಿ ವಂಚನೆ ಮಾಡಿ ಪರಾರಿಯಾದ ಪ್ರಕರಣ ಸಂಬಂಧ ವೇಣೂರು ಪೊಲೀಸರು ಮೂಡುಬಿದಿರೆ ತಾಲ್ಲೂಕಿನ ಗಂಟಾಲ್‌ಕಟ್ಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಿಹಾರ ರಾಜ್ಯದ ಸುಫೋಲ್ ಜಿಲ್ಲೆಯ ತ್ರಿವೇಣೆಗಂಝ್ ತಾಲ್ಲೂಕಿನ ರಘನಾಥಪುರ ಗ್ರಾಮದ ನಿವಾಸಿ ಸೂರಜ್ ದೇವ್ ಮಂಡಲ್ ಪುತ್ರ ಚಂದನ್ ಕುಮಾರ್ (30) ಆರೋಪಿ.
ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ನದ ಮಹಿಳೆಯೊಬ್ಬರ ಮನೆಗೆ ಸೇಲ್ಸ್ ಮ್ಯಾನ್ ಎಂದು ಪರಿಚಯಿಸಿ ಚಿನ್ನದ ಒಡವೆಗಳನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಪಡೆದು ಕರಗಿಸಿ ವಂಚಿಸಿದ್ದ.
ಡಿವೈಎಸ್‌ಪಿ ರೋಹಿನಿ ಸಿ.ಕೆ., ಬೆಳ್ತಂಗಡಿ ಸಿಪಿಐ ರವಿ ಬಿ.ಎಸ್. ಮಾರ್ಗದರ್ಶನದಲ್ಲಿ ವೇಣೂರು ಠಾಣೆ ಪಿಎಸ್‌ಐ ಅಕ್ಷಯ್ ಡವಗಿ, ಓಮನ ಎನ್. ನೇತೃತ್ವದಲ್ಲಿ ಎಎಸ್ಐಗಳಾದ ವೆಂಕಟೇಶ್ ನಾಯ್ಕ್, ಬೆನ್ನಿಚ್ಚನ್, ಕೃಷ್ಣ, ಕೇಶವತಿ, ಬಸವರಾಜ್, ಮೋಹನ್, ರಾಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.