ಕಾಸರಗೋಡು: 16 ವರ್ಷದ ಬಾಲಕನಿಗೆ ಬೈಕ್ ನೀಡಿದ ಆರೋಪಿ, ನಾರ್ಥ್ ತ್ರಕರಿಪುರ ತಂಗಯಂ ನಿವಾಸಿ ಶಾಹಿದ್ ಅನ್ಸಾರಿ (21) ಎಂಬುವರಿಗೆ ₹ 25 ಸಾವಿರ ದಂಡ ಮತ್ತು ಒಂದು ದಿನ ನ್ಯಾಯಾಲಯದ ಕಾರ್ಯಾಕಲಾಪ ನಡೆಯುವವರೆಗೆ ಸಜೆಯನ್ನು ಕಾಸರಗೋಡು ಪ್ರಧಾನ ನ್ಯಾಯಾಲಯ ವಿಧಿಸಿದೆ.
2021ರ ನ.14ರಂದು ತ್ರಿಕರಿಪುರ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಬಾಲಕ ಸಿಕ್ಕಿಬಿದ್ದಿದ್ದ. ಈ ಸಂಬಂಧ ಬೈಕ್ ಮಾಲೀಕ ಅನ್ಸಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.