ADVERTISEMENT

ಬಿಳಿನೆಲೆ: ವಿದ್ಯಾರ್ಥಿಗಳ ಯಕ್ಷರಂಗ ಪ್ರವೇಶ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:33 IST
Last Updated 28 ಜನವರಿ 2026, 7:33 IST
ಚೆಂಡೆ ವಾದಕ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಭಾಗವತ ಪದ್ಮನಾಭ ಪಳ್ಳಿಗದ್ದೆ, ಸಮಾಜ ಸೇವಕ ಕೇಶವ ಗೌಡ ಅವರನ್ನು ಸನ್ಮಾನಿಸಲಾಯಿತು
ಚೆಂಡೆ ವಾದಕ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಭಾಗವತ ಪದ್ಮನಾಭ ಪಳ್ಳಿಗದ್ದೆ, ಸಮಾಜ ಸೇವಕ ಕೇಶವ ಗೌಡ ಅವರನ್ನು ಸನ್ಮಾನಿಸಲಾಯಿತು   

ಸುಬ್ರಹ್ಮಣ್ಯ: ಇಲ್ಲಿನ ಸುಬ್ರಹ್ಮಣ್ಯ ಮಠ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿರುವ ಗೋಪಾಲಕೃಷ್ಣ ಪ್ರೌಢಶಾಲೆ ಮತ್ತು ವೇದವ್ಯಾಸ ವಿದ್ಯಾಲಯದಲ್ಲಿ ಯಕ್ಷಗಾನ ನಾಟ್ಯ ಕಲಿಯುತ್ತಿರುವ ವಿದ್ಯಾರ್ಥಿಗಳ ಯಕ್ಷ ರಂಗ ಪ್ರವೇಶ, ಗುರು ವಂದನೆ, ಚಿಣ್ಣರ ಯಕ್ಷ ಸಂಭ್ರಮ, ಯಕ್ಷಗಾನ ಬಯಲಾಟ ಬಿಳಿನೆಲೆ ಪ್ರೌಢಶಾಲೆ ಆವರಣದಲ್ಲಿ ನಡೆಯಿತು.

ಚೆಂಡೆ ವಾದಕ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಭಾಗವತ ಪದ್ಮನಾಭ ಪಳ್ಳಿಗದ್ದೆ, ಸಮಾಜ ಸೇವಕ ಕೇಶವ ಗೌಡ ಅವರನ್ನು ಸನ್ಮಾನಿಸಲಾಯಿತು.

ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಳಿನೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ ಮಾತನಾಡಿದರು.

ADVERTISEMENT

ಸುಬ್ರಹ್ಮಣ್ಯ ಮಠ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಶಿಕ್ಷಕರಾದ ಸತ್ಯಶಂಕರ್, ಪ್ರಶಾಂತ, ಶಿಕ್ಷಕ ಉಮೇಶ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.