ADVERTISEMENT

ಸುಬ್ರಹ್ಮಣ್ಯ | ರಕ್ತದಾನ ಜೀವ ಉಳಿಸುವ ಶ್ರೇಷ್ಠದಾನ: ಡಾ ರಾಮಕೃಷ್ಣರಾವ್

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 8:10 IST
Last Updated 27 ಫೆಬ್ರುವರಿ 2026, 8:10 IST
ರಕ್ತದಾನ ಶಿಬಿರವನ್ನು ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ರಾಮಕೃಷ್ಣರಾವ್ ಉದ್ಘಾಟಿಸಿದರು
ರಕ್ತದಾನ ಶಿಬಿರವನ್ನು ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ರಾಮಕೃಷ್ಣರಾವ್ ಉದ್ಘಾಟಿಸಿದರು   

ಸುಬ್ರಹ್ಮಣ್ಯ: ಶ್ರೇಷ್ಠವಾದ ಹಾಗೂ ಮನುಷ್ಯರ ಜೀವ ಉಳಿಸುವ ದಾನ ರಕ್ತದಾನವಾಗಿದೆ. ರಕ್ತದ ಅವಶ್ಯಕತೆ ಹಾಗೂ ಅಗತ್ಯ ಬಿದ್ದಾಗ 18 ವರ್ಷ ವಯಸ್ಸು, 45 ಕೆ.ಜಿ ತೂಕ ಇರುವ 65 ವರ್ಷದ ಒಳಗಿನವರು ರಕ್ತದಾನ ಮಾಡಬಹುದು ಎಂದು ಪುತ್ತೂರು ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ರಾಮಕೃಷ್ಣರಾವ್ ಹೇಳಿದರು.

ಕುಕ್ಕೆ ಶ್ರೀಸುಬ್ರಹ್ಮಣ್ಯ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕವು ರೆಡ್ ಕ್ರಾಸ್ ಘಟಕ, ಸ್ಕೌಟ್ಸ್‌, ರೋವರ್, ರೇಂಜರ್ಸ್‌, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಕೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ. ವಹಿಸಿದ್ದರು.

ADVERTISEMENT

ಅತಿಥಿಗಳಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್‌ ಅಧ್ಯಕ್ಷೆ ವಿಮಲಾ ರಂಗಯ್ಯ, ಕೆಎಸ್ಎಸ್ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿ ಕಕ್ಕೆಪದವು, ಪ್ರಮುಖರಾದ ಶೋಭಾ ಗಿರಿಧರ್, ಎನ್ಎಸ್ಎಸ್ ಸಂಯೋಜಕಿ ಆರತಿ, ರೇಂಜರ್ಸ್‌ ರೋವರ್ಸ್‌ ಸಂಯೋಜಕಿ ಪ್ರಮೀಳಾ, ಯೂತ್ ರೆಡ್ ಕ್ರಾಸ್ ಸಂಯೋಜಕಿ ಸ್ವಾತಿ, ರೇಂಜರ್ ರೋವರ್ ಸಂಯೋಜಕರಾದ ರಾಮಪ್ರಸಾದ್, ಅಶ್ವಿನಿ ಭಾಗವಹಿಸಿದ್ದರು.

ಎನ್ಎಸ್ಎಸ್ ಸಂಯೋಜಕಿ ಸುಮಿತ್ರ ಕುಮಾರಿ ಸ್ವಾಗತಿಸಿದರು. ವಿನೀತ ನಿರೂಪಿಸಿದರು. ಸ್ವಾತಿ ವಂದಿಸಿದರು.

ಬೃಹತ್ ರಕ್ತದಾನ  ಶಿಬಿರವನ್ನು ಪುತ್ತೂರು ರೋಟರಿ ಕ್ಯಾಂಪುಕೋ ಬ್ಲಡ್ ಸೆಂಟರ್ನ ವೈದ್ಯಾಧಿಕಾರಿ ಡಾ| ರಾಮಕೃಷ್ಣರಾವ್ ಉದ್ಘಾಟಿಸಿದರು.           

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.