
ಪ್ರಜಾವಾಣಿ ವಾರ್ತೆ
ಬೆಳ್ತಂಗಡಿ : ತಾಲ್ಲೂಕಿನ ಬಂದಾರು ಗ್ರಾಮದಲ್ಲಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನಂತಹ ವಸ್ತುವೊಂದು ಬುಧವಾರ ಸಂಜೆ ಸ್ಫೋಟಗೊಂಡು ಬಾಲಕನೊಬ್ಬ ಗಾಯಗೊಂಡಿದ್ದಾನೆ.
ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಗಾಯಗೊಂಡಿರುವ ಬಾಲಕ. ಅಂಗಳದಲ್ಲಿ ಮಕ್ಕಳಿಬ್ಬರು ಆಟವಾಡುತ್ತಿದ್ದ ವೇಳೆ ಚೆಂಡಿನಂಥ ವಸ್ತುವೊಂದು ಅವರಿಗೆ ಸಿಕ್ಕಿತ್ತು. ಬಾಲಕರಿಬ್ಬರು ಅದನ್ನು ಹೆಕ್ಕಿಕೊಂಡು ಬಂದಿದ್ದರು. ಅದನ್ನು ಬಳಸಿ ಕ್ರಿಕೆಟ್ ಆಟವಾಡಿದ್ದರು. ಒಬ್ಬ ಬಾಲಕ ಅದನ್ನು ಬಳಸಿ ಬೌಲಿಂಗ್ ಮಾಡಿದ್ದು, ಅಭೀಶ್ ಬ್ಯಾಟ್ ನಿಂದ ಬಾರಿಸಿದ್ದ. ಈ ವೇಳೆ ಅದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಮೈಯಲ್ಲಿ ಅಲ್ಲಲ್ಲಿ ಗಾಯಗಳಾಗಿವೆ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.