ADVERTISEMENT

ಶಾಂಭವಿ ನದಿಗೆ ಉರುಳಿದ ಬೊಲೆರೊ; ಮಹಿಳೆ ಸಾವು 

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 6:53 IST
Last Updated 12 ಜನವರಿ 2019, 6:53 IST
   

ಮಂಗಳೂರು: ಹೊರವಲಯದ ಮೂಲ್ಕಿ ಸಮೀಪದ ಕಿನ್ನಿಗೋಳಿಯ ಸಂಕಲ ಕರಿಯ ಎಂಬಲ್ಲಿ ಶನಿವಾರ ಬೆಳಿಗ್ಗೆ ಬೊಲೆರೊ ವಾಹನವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಶಾಂಭವಿ ನದಿಗೆ ಉರುಳಿ ಬಿದ್ದಿದೆ.

ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಮೂವರನ್ನು ರಕ್ಷಿಸಿದ್ದಾರೆ.

ಸಚ್ಚರಿಪೇಟೆ ಬೋಳ ನಿವಾಸಿ ಡಯಾನಾ (45) ಮೃತ ಮಹಿಳೆ. ಇವರ ಪತಿ ಸ್ಟ್ಯಾನಿ ಮಸ್ಕರೇನಸ್ ವಾಹನ ಚಾಲನೆ ಮಾಡುತ್ತಿದ್ದರು. ಮಕ್ಕಳಾದ ಶೆಲ್ಟನ್ ಮತ್ತು ಶಮಿದ್ ಜೊತೆಗಿದ್ದರು. ಬೆಳಿಗ್ಗೆ 8.30ಕ್ಕೆ ಘಟನೆ ಸಂಭವಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.