ADVERTISEMENT

ದಕ್ಷಿಣ ಕನ್ನಡ | ನೀರಿನ ಹೊಂಡಕ್ಕೆ ಬಿದ್ದ ಕಾರು: ಚಾಲಕನ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 7:36 IST
Last Updated 5 ಜುಲೈ 2022, 7:36 IST
ಸೋಮೇಶ್ವರ ಉಚ್ಚಿಲಗುಡ್ಡೆಯ ಅಂಗನವಾಡಿಗೆ ನೀರು ನುಗ್ಗಿದ್ದರಿಂದ ಒಳಗಿದ್ದ ದಾಖಲೆಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.
ಸೋಮೇಶ್ವರ ಉಚ್ಚಿಲಗುಡ್ಡೆಯ ಅಂಗನವಾಡಿಗೆ ನೀರು ನುಗ್ಗಿದ್ದರಿಂದ ಒಳಗಿದ್ದ ದಾಖಲೆಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.   

ಮಂಗಳೂರು: ಉಚ್ಚಿಲ ಸೋಮೇಶ್ವರದಲ್ಲಿ ಮಂಗಳವಾರ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ಬಿದ್ದಿತ್ತು. ಕಾರಿನೊಳಗೆ ಬಂಧಿಯಾಗಿದ್ದ ಚಾಲಕನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ನಿರಂತರ ಮಳೆಯ ಪರಿಣಾಮ ಉಳ್ಳಾಲ ತಾಲ್ಲೂಕಿನ ಉಚ್ಚಿಲಗುಡ್ಡೆ ಅಂಗನವಾಡಿಗೆ ನೀರು ನುಗ್ಗಿದೆ. ಅಂಗನವಾಡಿ ಒಳಗಿದ್ದ ದಾಖಲೆಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಸುರಕ್ಷಿತವಾಗಿ ಹೊರ ತಂದರು.

ಕಾಸರಗೋಡು– ವಿಟ್ಲ ನಡುವಿನ ಹೆದ್ದಾರಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದೆ. ಗುಡ್ಡ ಕುಸಿತದ ವೇಳೆ ಇದೇ ಮಾರ್ಗವಾಗಿ ಸಾಗುತ್ತಿದ್ದ ಬೈಕ್ ಸವಾರ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಬೈಕ್ ಜಖಂಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT