ADVERTISEMENT

ಮೂಡುಬಿದಿರೆ |ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:36 IST
Last Updated 29 ಸೆಪ್ಟೆಂಬರ್ 2025, 5:36 IST
ಸಮಿತ್‌ರಾಜ್ 
ಸಮಿತ್‌ರಾಜ್    

ಮೂಡುಬಿದಿರೆ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹಸಂಚಾಲಕ, ಮೂಡುಬಿದಿರೆಯ ಸಮಿತ್ ರಾಜ್ ವಿರುದ್ಧ ಬಜಪೆ ಪೊಲೀಸರು ಶನಿವಾರ ದೂರು ದಾಖಲಿಸಿಕೊಂಡಿದ್ದಾರೆ.

2023ರಲ್ಲಿ ಮೂಡುಬಿದಿರೆಯ ಬಿಜೆಪಿ ಕಾರ್ಯಕರ್ತರೊಬ್ಬರು ಬಜಪೆಯಲ್ಲಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮಿತ್‌ರಾಜ್‌ ಅವರನ್ನು ಸಂಪರ್ಕಿಸಿದರೆ ಆತ ಶಾಸಕರ ಮೂಲಕ ಹಣದ ಸಹಾಯ ಮಾಡಿಸುತ್ತಾನೆ ಎಂದು ಪರಿಚಿತರೊಬ್ಬರು ಅಪಘಾತಕ್ಕೀಡಾದ ಯುವಕನ ಸಹೋದರಿಗೆ ತಿಳಿಸಿದ್ದರು. ಯುವತಿ ಸಮಿತ್‌ರಾಜ್‌ ಅವರನ್ನು ಸಂಪರ್ಕಿಸಿದ್ದರು. ಆತ ಯುವತಿಯನ್ನು ಮೂಡುಬಿದಿರೆ ಶಾಸಕರ ಕಚೇರಿಗೆ ಕರೆದುಕೊಂಡು ಹೋಗಿ ಶಾಸಕರ ಮೂಲಕ ಚಿಕಿತ್ಸೆಗೆ ಸ್ವಲ್ಪ ಹಣದ ವ್ಯವಸ್ಥೆ ಮಾಡಿಸಿದ್ದ ಎನ್ನಲಾಗಿದೆ.

ಈ ವೇಳೆ ಯುವತಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಸಮಿತ್‌ರಾಜ್‌, ಯುವತಿಯ ಸಹೋದರನ ಆರೋಗ್ಯ ವಿಚಾರಿಸುವ ನೆಪದಲ್ಲಿ ಆಗಾಗ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಎನ್ನಲಾಗಿದೆ. ಮಂಗಳೂರು ವಿಮಾನ ನಿಲ್ದಾಣವೂ ಸೇರಿದಂತೆ ವಿವಿಧೆಡೆ ಕಾರಿನಲ್ಲಿ ಸುತ್ತಾಡಿಸಿ ಆಕೆಯ ಫೊಟೊಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ. ಮದುವೆಯಾಗುವಂತೆಯೂ ಪೀಡಿಸುತ್ತಿದ್ದ ಎನ್ನಲಾಗಿದೆ. ಯುವತಿ ನಿರಾಕರಿಸಿದ್ದಾಗ ಆಕೆ ತನ್ನೊಂದಿಗಿದ್ದ ವಿವಿಧ ಫೊಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದ ಎನ್ನಲಾಗಿದೆ. ಅತನ ಉಪಟಳದಿಂದ ಬೇಸರಗೊಂಡ ಯುವತಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.