ADVERTISEMENT

ಮಾನವೀಯ ನೆಲೆಯ ಅತ್ಯುನ್ನತ ಸೇವೆ 

ಪ್ರಜ್ಞಾ ಆಶ್ರಮದ ಭಿನ್ನ ಸಾಮರ್ಥ್ಯದವರಿಗೆ ವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 6:46 IST
Last Updated 18 ಜನವರಿ 2026, 6:46 IST
ಪುತ್ತೂರಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿರುವ ಭಿನ್ನ ಸಾರ್ಮರ್ಥ್ಯದ 15 ಮಂದಿಗೆ ಬಪ್ಪಳಿಗೆ ಅಮರ್ ಅಕ್ಬರ್ ಅಂಥೋಣಿ ಸಂಘಟನೆ ವತಿಯಿಂದ ಶುಕ್ರವಾರ ನಡೆದ ಜರ್ಸಿ ವಿತರಣೆ ಕಾರ್ಯಕ್ರಮವನ್ನು ಡಾ.ಪ್ರದೀಪ್ ಬೋರ್ಕರ್ ಉದ್ಘಾಟಿಸಿದರು
ಪುತ್ತೂರಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿರುವ ಭಿನ್ನ ಸಾರ್ಮರ್ಥ್ಯದ 15 ಮಂದಿಗೆ ಬಪ್ಪಳಿಗೆ ಅಮರ್ ಅಕ್ಬರ್ ಅಂಥೋಣಿ ಸಂಘಟನೆ ವತಿಯಿಂದ ಶುಕ್ರವಾರ ನಡೆದ ಜರ್ಸಿ ವಿತರಣೆ ಕಾರ್ಯಕ್ರಮವನ್ನು ಡಾ.ಪ್ರದೀಪ್ ಬೋರ್ಕರ್ ಉದ್ಘಾಟಿಸಿದರು   

ಪುತ್ತೂರು: ಪ್ರಜ್ಞಾ ಆಶ್ರಮದಲ್ಲಿ ಭಿನ್ನ ಸಾಮರ್ಥ್ಯದವರನ್ನು ಸಾಕುತ್ತಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಯ ಕಾರ್ಯ ಸಮಾಜದ ಅತ್ಯುನ್ನತ ಸೇವೆಯಾಗಿದ್ದು, ಈ ದಂಪತಿಗೆ ಸಮಾಜ ಸಹಕಾರ, ಪ್ರೋತ್ಸಾಹ ನೀಡಬೇಕು. ಸರ್ಕಾರವೂ ನೆರವಿಗೆ ಬರಬೇಕಿದೆ. ಸ್ವಂತ ಕಟ್ಟಡ ನಿರ್ಮಾಣದ ಮೂಲಕ ಪ್ರಜ್ಞಾಶ್ರಮದ ಕನಸು ಶೀಗ್ರ ನೆರವೇರಬೇಕಿದೆ ಎಂದು ಪುತ್ತೂರಿನ ಡಾ.ಪ್ರದೀಪ್ ಬೋರ್ಕರ್ ಹೇಳಿದರು.

ಪುತ್ತೂರಿನ ಬೀರಮಲೆ ಬೆಟ್ಟದಲ್ಲಿರುವ ಪ್ರಜ್ಞಾ ಆಶ್ರಮದಲ್ಲಿರುವ ಭಿನ್ನ ಸಾರ್ಮಥ್ರ್ಯದ 15 ಮಂದಿಗೆ ಬಪ್ಪಳಿಗೆ ಅಮರ್ ಅಕ್ಬರ್ ಅಂತೋಣಿ ಸಂಘಟನೆ ವತಿಯಿಂದ ಶುಕ್ರವಾರ ನಡೆದ ವಸ್ತ್ರ ನೀಡುವ ಕಾರ್ಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತ ಸಂಶುದ್ದೀನ್ ಸಂಪ್ಯ ಮಾತನಾಡಿದರು.

ADVERTISEMENT

ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕವಾಗಿ ಎಳ್ಳು-ಬೆಲ್ಲ ನೀಡಲಾಯಿತು. ಡಾ. ಪ್ರದೀಪ್ ಬೋರ್ಕರ್ ಅವರನ್ನು ಗೌರವಿಸಲಾಯಿತು.

ಅಮರ್ ಅಕ್ಬರ್ ಅಂಥೋಣಿ ಸಂಘಟನೆಯ ವ್ಯವಸ್ಥಾಪಕ ಸೀತಾರಾಮ ಅಯ್ಯರ್, ಉದ್ಯಮಿ ಗಣೇಶ್ ಕಾಮತ್, ಪತ್ರಕರ್ತರಾದ ಮೇಘಾ ಪಾಲೆತ್ತಾಡಿ, ಲೋಕೇಶ್ ಬನ್ನೂರು, ಅಜಿತ್ ಕುಮಾರ್, ರಾಜೇಶ್ ಪಟ್ಟೆ, ಅನೀಶ್ ಕುಮಾರ್, ಯತೀಶ್ ಬಪ್ಪಳಿಗೆ ಭಾಗವಹಿಸಿದ್ದರು. ಸಂಘಟನೆಯ ತಂಡದ ಮುಖ್ಯಸ್ಥ ರಝಾಕ್ ಬಪ್ಪಳಿಗೆ ಸ್ವಾಗತಿಸಿ ವಂದಿಸಿದರು.