ADVERTISEMENT

ಬೆಳ್ತಂಗಡಿ | ಚೆಕ್‌ಬೌನ್ಸ್ ಪ್ರಕರಣ: ಆರೋಪಿಗಳ ಖುಲಾಸೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 14:11 IST
Last Updated 20 ಜನವರಿ 2024, 14:11 IST

ಬೆಳ್ತಂಗಡಿ: ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳೂರಿನ ಪಾವೂರು ನಿವಾಸಿ ಚಂದ್ರಹಾಸ ಅಮೀನ್ ಎಂಬುವರ ವಿರುದ್ಧ ಸಲ್ಲಿಸಿದ್ದ ₹ 4.75 ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಮುಂಡಾಜೆ ನಿವಾಸಿ ಗುಣಪಾಲ ಎಂ.ಎಸ್.ಎಂಬುವರ ವಿರುದ್ಧದ ₹ 81,721 ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಕಾಜೂರು ನಿವಾಸಿ ಸಮೀರ್ ಎಂಬರ ವಿರುದ್ಧ ಸಲ್ಲಿಸಿದ್ದ ₹ 1 ಲಕ್ಷ ಮೊತ್ತದ ಚೆಕ್ ಬೌನ್ಸ್ ಪ್ರಕರಣ ಹಾಗೂ ಮೂಡುಬಿದಿರೆ ನಿವಾಸಿ ಸುನಿಲ್ ಎಂಬುವರ ‌ವಿರುದ್ಧದ ₹ 45 ಸಾವಿರ ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮುಂಡಾಜೆ ನಿವಾಸಿಯಾದ ಪ್ರಸಾದ್ ಶೆಟ್ಟಿ ಎಂಬುವರ ವಿರುದ್ಧ ಸಲ್ಲಿಸಲಾಗಿದ್ದ ₹ 1 ಲಕ್ಷ ಮೌಲ್ಯದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಮಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಮುಂಡಾಜೆಯ ನಿವಾಸಿ ರವಿ ಎನ್. ವಿರುದ್ಧ ಸಲ್ಲಿಸಿದ್ದ ₹ 5.65 ಲಕ್ಷದ ಚೆಕ್‌ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದೆ.

ADVERTISEMENT

ಆರೋಪಿಗಳ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ಸ್‌ನ ವಕೀಲರಾದ ನವಾಜ್ ಶರೀಫ್ ಎ., ಮಮ್ತಾಜ್ ಬೇಗಂ, ಇರ್ಷಾದ್, ಮತ್ತು ಸಪ್ನಾಝ್ ಅವರನ್ನು ಒಳಗೊಂಡ ವಕೀಲರ ತಂಡ ವಕಾಲತು ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.