ADVERTISEMENT

ಮಂಗಳೂರು: ‘ಚಾಕೋಲೇಟ್ ಸ್ಟ್ರೀಟ್ 2024’ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 10 ಮೇ 2024, 5:58 IST
Last Updated 10 ಮೇ 2024, 5:58 IST

ಮಂಗಳೂರು: ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎನ್‌ಐಸಿಒ) ವತಿಯಿಂದ ಇದೇ 11 ಮತ್ತು 12ರಂದು  ನಗರದ ಪಾಂಡೇಶ್ವರದ ಫೀಜಾ ಬೈ ನೆಕ್ಸಸ್‌ ಮಾಲ್‌ನ ಮೂರನೇ ಮಹಡಿಯಲ್ಲಿ ‘ಚಾಕೋಲೇಟ್ ಸ್ಟ್ರೀಟ್ 2024’ ಅನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಕಾರ್ಯಕ್ರಮದ ವಿದ್ಯಾರ್ಥಿ ಆಯೋಜಕ ಬ್ರಿಯಾನ್‌ ಬಾನ್ಸ್‌, ‘ಸ್ಥಳೀಯ ಬೇಕರಿ ಉದ್ಯಮಿಗಳು ಹಾಗೂ ಇತರ ಕಿರುಉದ್ಯಮಿಗಳಿಗೆ  ವೇದಿಕೆ  ಕಲ್ಪಿಸಲು ಚಾಕೋಲೇಟ್ ಸ್ಟ್ರೀಟ್‌ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದ್ದೇವೆ.  ಇದರ ಐದನೇ ಆವೃತ್ತಿಯ ಉದ್ಘಾಟನೆ ಇದೇ 11ರಂದು ಮಧ್ಯಾಹ್ನ 12ಕ್ಕೆ  ನೆರವೇರಲಿದೆ.  ಓಷನ್ ಪರ್ಲ್ ಹೋಟೆಲ್‌ಗಳ ಬಳಗದ ಗುಂಪು ಕಲಿಕೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ದುರೈ ಅರುಣ್ ಪ್ರಶಾಂತ್ ಸೆಲ್ವಂ  ಹಾಗೂ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಬ್ರ್ಯಾಂಡಿಂಗ್ ವಿಭಾಗದ ನಿರ್ದೇಶಕ ರೋಷನ್ ಕೋಲಾರ ಭಾಗವಹಿಸಲಿದ್ದಾರೆ‘ ಎಂದರು.

‘ಬೆಳಿಗ್ಗೆ 10ರಿಂದ ಸಂಜೆ 7:30ರವರೆಗೆ ಕಾರ್ಯಕ್ರಮ ನಡೆಯಲಿದೆ. ಮನೆಯಲ್ಲೇ ಬೇಕರಿ ತಿನಿಸು ತಯಾರಿಸುವ 20ಕ್ಕೂ ಹೆಚ್ಚು ಮಂದಿ ಹಾಗೂ 5 ನವೋದ್ಯಮಿಗಳು ಭಾಗವಹಿಸಲಿದ್ದಾರೆ. ಪ್ರತಿಭಾ ಪ್ರದರ್ಶನಕ್ಕೂ ಸ್ಥಳೀಯರಿಗೆ ವೇದಿಕೆ ಕಲ್ಪಿಸಲಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಆಯೋಜಕರಾದ ಮಾಳವಿಕಾ ನಾಯರ್, ಅನಿಷಾ ನಿಶಾಂತ್‌ ಹಾಗೂ ಅಮೇಯ ದಾಸ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.