ADVERTISEMENT

ಸ್ವಾವಲಂಬಿ ಬದುಕು: ಕರಾವಳಿ ಮಹಿಳೆ ಮಾದರಿ- ಯು.ಟಿ.ಖಾದರ್‌

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಯು.ಟಿ.ಖಾದರ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:53 IST
Last Updated 17 ನವೆಂಬರ್ 2025, 4:53 IST
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಹೊಸ ಉತ್ಪನ್ನಗಳನ್ನು ಗಣ್ಯರು ಭಾನುವಾರ ಬಿಡುಗಡೆಗೊಳಿಸಿದರು. ವೇದವ್ಯಾಸ ಕಾಮತ್‌, ರವಿರಾಜ ಹೆಗ್ಡೆ, ಜಿ.ಟಿ.ದೇವೇಗೌಡ, ಎಂ.ಎನ್‌.ರಾಜೇಂದ್ರ ಕುಮಾರ್‌, ಯು.ಟಿ.ಖಾದರ್‌, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಹೊಸ ಉತ್ಪನ್ನಗಳನ್ನು ಗಣ್ಯರು ಭಾನುವಾರ ಬಿಡುಗಡೆಗೊಳಿಸಿದರು. ವೇದವ್ಯಾಸ ಕಾಮತ್‌, ರವಿರಾಜ ಹೆಗ್ಡೆ, ಜಿ.ಟಿ.ದೇವೇಗೌಡ, ಎಂ.ಎನ್‌.ರಾಜೇಂದ್ರ ಕುಮಾರ್‌, ಯು.ಟಿ.ಖಾದರ್‌, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: ‘ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದು ಹೇಗೆ ಎಂದು ಕರಾವಳಿಯ ಮಹಿಳೆಯರು ದೇಶಕ್ಕೇ ತೋರಿಸಿಕೊಟ್ಟಿದ್ದಾರೆ. ಹೆಂಚಿನ ಕಾರ್ಖಾನೆ, ಬೀಡಿ, ಗೋಡಂಬಿ ಉದ್ದಿಮೆಗಳಲ್ಲಿ ದುಡಿಯುತ್ತಲೇ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅವರನ್ನು ಬೆಂಬಲಿಸಿದ್ದು ಸಹಕಾರ ಚಳವಳಿ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.

72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಲ, ರಾಜ್ಯ ಸಹಕಾರ ಮಾರಾಟ ಮಹಾಮಂಡಲ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ‘ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿ ಬಲವರ್ಧನೆ’ ಕುರಿತು ಇಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

‘ಕರಾವಳಿಯಲ್ಲಿ ಜವಳಿ ಕಾರ್ಖಾನೆ ಬಂದರೆ ಸಾವಿರಾರು ಮಹಿಳೆಯರಿಗೆ ಉದ್ಯೋಗ ಸಿಗಲಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದರು. 

ADVERTISEMENT

ಉತ್ತಮ ಸ್ವಸಹಾಯ ಸಂಘಗಳಿಗೆ ಪುರಸ್ಕಾರ ಪ್ರದಾನ ಮಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ, ‘ರೈತರು ಮತ್ತು ಬಡವರು ದಿನ ಬಡ್ಡಿ ಕೊಟ್ಟು ಬದುಕಬೇಕಾದ ಕಾಲ‌ವಿತ್ತು. ಸಹಕಾರ ಚಳವಳಿಯು ಅವರಿಗೆ ಶೋಷಣೆ‌ಯಿಂದ ಮುಕ್ತಿ ಕೊಡಿಸಿದೆ. ಸಹಕಾರ ಚಳವಳಿಯನ್ನು ಮನೆ ಮನೆಗೂ ತಲುಪಿಸಿದ ಕೀರ್ತಿ ದಕ್ಷಿಣಕನ್ನಡ ಜಿಲ್ಲೆಯದು. ಇಲ್ಲಿನ ಸಹಕಾರ ಬ್ಯಾಂಕ್‌ಗಳು ಬೆಳೆ ಸಾಲಕ್ಕೆ ಸೀಮಿತವಾಗಿಲ್ಲ.  ಶಿಕ್ಷಣ, ವ್ಯಾಪಾರ ಮತ್ತಿತರ ಉದ್ದೇಶಗಳಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿವೆ’ ಎಂದರು. 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌, ‘ಮುಂದೆ ಈ ಜಿಲ್ಲೆಯವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು. 

ಸಹಕಾರಿ ರತ್ನ ಪ್ರಶಸ್ತಿ ಪಡೆದ ಕರಾವಳಿಯ ಹತ್ತು ಮಂದಿಯನ್ನು ಗೌರವಿಸಲಾಯಿತು.

ಶಾಸಕರಾದ ಡಿ.ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಯಶಪಾಲ ಸುವರ್ಣ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಕಿಶೋರ್ ಕುಮಾರ್ ಬೊಟ್ಯಾಡಿ, ದ.ಕ.ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ, ಸಹಕಾರಿ ಸಂಘಗಳ ನಿಬಂಧಕ  ಟಿ.ಎಚ್.ಎಂ ಕುಮಾರ್, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಜಯಕರ ಶೆಟ್ಟಿ,  ವ್ಯವಸ್ಥಾಪಕ ನಿರ್ದೇಶಲ ಕೆ.ಎಸ್.ನವೀನ್, ರಾಜ್ಯ ಸಹಕಾರ  ಮಾರಾಟ ಮಹಾಮಂಡಲದ ನಿರ್ದೇಶಕ ಐಕಲ ಬಾವ ದೇವಿಪ್ರಸಾದ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜ, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಉಪನಿಬಂಧಕರಾದ ಎಚ್.ಎನ್. ರಮೇಶ್ , ಲಾವಣ್ಯ ಕೆ.ಆರ್‌., ಎಸ್‌ಸಿಡಿಸಿಸಿ ಬ್ಯಾಂಕಿನ ಸಿಇಒ ಗೋಪಾಲ ಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‌ನ ಸಿಇಒ ಪೂರ್ಣಿಮಾ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.  

ಕಾರ್ಯಕ್ರಮದ ಅಂಗವಾಗಿ ಮಂಗಳೂರಿನಲ್ಲಿ ಭಾನುವಾರ ಸಹಕಾರ ಮೆರವಣಿಗೆ ನಡೆಯಿತು: ಪ್ರಜಾವಾಣಿ ಚಿತ್ರ

ಸಹಕಾರ ರಂಗದ ಹಿರಿಮೆ ಬಿಂಬಿಸಿದ ಮೆರವಣಿಗೆ ಕಾರ್ಯಕ್ರಮದ ಪ್ರಯುಕ್ತ ಕೊಡಿಯಾಲ್‌ಬೈಲಿನ ಎಸ್‌ಸಿಡಿಸಿಸಿ ಬ್ಯಾಂಕಿನ ಕೇಂದ್ರ ಕಚೇರಿಯಿಂದ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರ‌ ಮೆರವಣಿಗೆ ನಡೆಯಿತು. ಸಹಕಾರ ರಥ ಮೊಳಹಳ್ಳಿ ಶಿವರಾವ್ ಹೈನುಗಾರಿಕೆ ಮೀನುಗಾರಿಕೆ ಕೆ.ಎಂ.ಎಫ್. - ನಂದಿನಿ ಗ್ರಾಮೀಣ ಬ್ಯಾಂಕಿಂಗ್‌ ಚಟುವಟಿಕೆ ನವೋದಯ ಗುಂಪಿನ ಸಭೆ ಪ್ರಾಥಮಿಕ ಪತ್ತಿನ ಸಂಘ ಕೃಷಿ ಕುರಿತ ಸ್ತಬ್ಧಚಿತ್ರಗಳು ಜಿಲ್ಲೆಯ ಸಹಕಾರಿ ಚಟುವಟಿಕೆಗೆ ಕನ್ನಡಿ ಹಿಡಿದವು. ಭುವನೇಶ್ವರಿ ದೇವಿ ತುಳುನಾಡು ವೈಭವ ಡೊಳ್ಳು ಕುಣಿತ ಚಂಡೆ ಕೊಂಬು ಸಹಕಾರಿ ಬಣ್ಣದ ಕೊಡೆಗಳು ಮಹಿಳೆಯರ ವೀರಗಾಸೆ ಸುಗ್ಗಿ ಕುಣಿತ ಪುರವಂತಿಗೆ ಚೆಂಡೆ ವಾಹನ ಹೊನ್ನಾವರ ಬ್ಯಾಂಡ್ ಸೋಮನ ಕುಣಿತ ಪಟ್ಟದ ಕುಣಿತ ಗೊರವರ ಕುಣಿತಗಳು ಪ್ರಮುಖ ಆಕರ್ಷಣೆಯಾಗಿದ್ದವು.  

‘ಅಗ್ರಸ್ಥಾನದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್’

‘ದೇಶದಲ್ಲಿ 351 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳಿದ್ದು ಅಗ್ರಸ್ಥಾನದಲ್ಲಿರುವ ಬ್ಯಾಂಕ್‌ಗಳಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ಕೂಡ ಸ್ಥಾನ ಪಡೆದಿದೆ. ಎಂ.ಎನ್.ರಾಜೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಬ್ಯಾಂಕ್‌ ಹಮ್ಮಿಕೊಳ್ಳುತ್ತಿರುವ ಚಟುವಟಿಕೆ ಇತರರಿಗೂ ಮಾದರಿ’ ಎಂದು ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಹೇಳಿದರು.  .

‘ಸಹಕಾರ ಮಾಣಿಕ್ಯ ಪ್ರಶಸ್ತಿ’

ಪ್ರದಾನ ಬಜಪೆ ವ್ಯವಸಾಯ ಸೇವಾ ಸಹಕಾರಿ ಸಂಘ ಕೋಟ ಸಹಕಾರಿ ವ್ಯವಸಾಯಿಕ ಸಂಘ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ‘ಸಹಕಾರ ಮಾಣಿಕ್ಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು 5 ಗ್ರಾಂ ಚಿನ್ನದ ಪದಕ  ಪಾರಿತೋಷಕ ಹಾಗೂ ₹ 10 ಸಾವಿರ ನಗದನ್ನು ಒಳಗೊಂಡಿದೆ.    ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ವಿಟ್ಲ ಪಿರ್ಕ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ಕಾಪು ಕ್ಷೇತ್ರ ಸ್ತ್ರೀಶಕ್ತಿ ಸ್ವಸಹಾಯ ಗುಂಪು ವಿವಿಧೋದ್ದೇಶ ಸಹಕಾರಿ ಸಂಘ ಉಳ್ಳಾಲ ಮೀನುಗಾರರ ಮಹಿಳಾ ಸೇವಾ ಸಹಕಾರಿ ಸಂಘ ಹಾಗೂ  ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾ.ಸ.ಸಂಘ ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘ ಹಳೆಯಂಗಡಿಯ ಪ್ರಿಯದರ್ಶಿನಿ ಸಹಕಾರ ಸಂಘ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘ ಒಡಿಯೂರು ವಿವಿಧೋದ್ದೇಶ ಸಹಕಾರಿ ಸಂಘ  ಮಂಗಳೂರು ಟಿ.ಎ.ಪಿ.ಸಿ.ಎಂ.ಎಸ್‌  ವಜ್ರ ಮಹೋತ್ಸವ ಪೂರೈಸಿದ ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಅಪರೇಟಿವ್ ಸೊಸೈಟಿ ಸುವರ್ಣ ಮಹೋತ್ಸವ ಪೂರೈಸಿದ  ಮಂಗಳೂರು ಆಟೋರಿಕ್ಷಾ ಮತ್ತು ಕಾರು ಚಾಲಕರ ಸಹಕಾರಿ ಸಂಘಗಳನ್ನು ಗೌರವಿಸಲಾಯಿತು. ಗುರುತಿಸಿದ ಬೆಳ್ತಂಗಡಿ ತಾಲ್ಲೂಕಿ ಪಿಲಿಗೂಡು ಹಾಗೂ ಕುಂದಾಪುರ ತಾಲ್ಲೂಕಿ ಸಿದ್ದಾಪುರದ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಗೌರವಿಸಲಾಯಿತು. ಮಂಗಳೂರಿನ ಮುಖ್ಯಪ್ರಾಣ ನವೋದಯ ಸ್ವಸಹಾಯ ಗುಂಪು  ಹಾಗೂ ಬಜಗೋಳಿಯ ನಿಕೇತ ನವೋದಯ ಸ್ವಸಹಾಯ ಗುಂಪುಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪತ್ರಕರ್ತ  ಶ್ರೀನಿವಾಸ ಇಂದಾಜೆ ಹಾಗೂ ರ‍್ಯಾಂಕ್ ವಿಜೇತರಾದ ಚೇತನಾ ಬಿ.ಎಸ್. ಹಾಗೂ ಪ್ರತೀಕ್ಷಾ ಬಲ್ಪಂತಿ  ಅವರನ್ನು ಗೌರವಿಸಲಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.