ADVERTISEMENT

 ತುಳು ಲೇಖನಗಳ ಸಂಕಲನ ‘ರಡ್ಡ್ ಕವುಲೆ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 21:24 IST
Last Updated 28 ನವೆಂಬರ್ 2022, 21:24 IST
‘ರಡ್ಡ್ ಕವುಲೆ’ ಕೃತಿಯನ್ನು ಮುಲ್ಕಿ ಕರುಣಾಕರ ಶೆಟ್ಟಿ ಬಿಡುಗಡೆ ಮಾಡಿದರು. ಧನಂಜಯ ಕುಂಬ್ಳೆ, ಸನ್ನಿಧಿ, ರಾಜಶ್ರೀ ಟಿ.ರೈ ಪೆರ್ಲ ಇದ್ದಾರೆ
‘ರಡ್ಡ್ ಕವುಲೆ’ ಕೃತಿಯನ್ನು ಮುಲ್ಕಿ ಕರುಣಾಕರ ಶೆಟ್ಟಿ ಬಿಡುಗಡೆ ಮಾಡಿದರು. ಧನಂಜಯ ಕುಂಬ್ಳೆ, ಸನ್ನಿಧಿ, ರಾಜಶ್ರೀ ಟಿ.ರೈ ಪೆರ್ಲ ಇದ್ದಾರೆ   

ಮಂಗಳೂರು: ತುಳು ಮತ್ತು ಕನ್ನಡ ಲೇಖಕಿ, ರಾಜಶ್ರೀ ಟಿ.ರೈ ಪೆರ್ಲ ಅವರ ತುಳು ಲೇಖನಗಳ ಸಂಕಲನ ‘ರಡ್ಡ್ ಕವುಲೆ’ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಈಚೆಗೆ ನಡೆಯಿತು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಮುಲ್ಕಿ ಕರುಣಾಕರ ಶೆಟ್ಟಿ ಅವರು ‘ಈ ಕೃತಿ ತುಳು ಸಂಸ್ಕೃತಿಯ ಬಗೆಗಿನ ಅನ್ವೇಷಣೆಯ ಸೆಳೆತ ಹುಟ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಧನಂಜಯ ಕುಂಬ್ಳೆ ‘ತುಳು ಸಂಸ್ಕೃತಿಯಲ್ಲಿ ಹೆಚ್ಚು ಅಧ್ಯಯನಕ್ಕೆ ಒಳಗಾಗದ ವಿಷಯಗಳನ್ನು ರಾಜಶ್ರೀ ಅವರು ಅನ್ವೇಷಣೆಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಂಶೋಧನೆ, ಅನುವಾದ, ಅಂಕಣ ಬರಹ ಮುಂತಾದ ರೀತಿಯಲ್ಲಿ ತುಳು ಸಾಹಿತ್ಯ ಲೋಕಕ್ಕೆ ಅವರು ನೀಡುತ್ತಿರುವ ಕೊಡುಗೆ ವಿಶಿಷ್ಟ’ ಎಂದು ಹೇಳಿದರು.

ADVERTISEMENT

ಲೇಖಕಿ ರಾಜಶ್ರೀ ಮಾತಾನಾಡಿದರು. ಪರ್ತಕರ್ತರಾದ ಭುವನ ದಿನೇಶ್ ಕುಂಪಲ, ಪವನ್ ರಾಜ್, ಯಶೋಧರ ಕೋಟ್ಯಾನ್ ಇದ್ದರು. ಸನ್ನಿಧಿ ಪೆರ್ಲ ಕೃತಿಯ ಬಗ್ಗೆ ಮಾತನಾಡಿದರು. ನಿರೀಕ್ಷಾ ಸಸಿಹಿತ್ಲು ವಂದಿಸಿದರು. ದೀಕ್ಷಿತಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.